ಮನ್ವಂತ್ ಕುಮಾರ್ ಕರ್ನಾಟಕದ ಆಟಕ್ಕೆ ಮನ್ವಂತ್ ಮರುಜೀವ
ಕರ್ನಾಟಕ ತಂಡವು ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಮೊದಲ ದಿನದ ಆಟದ ಮುಕ್ತಾಯಕ್ಕೆ 281 ರನ್‌ಗಳ ಗೌರವಯುತ ಮೊತ್ತ ಕಲೆಹಾಕಿತು. ಯುವ ಪ್ರತಿಭೆ ಮನ್ವಂತ್ ಕುಮಾರ್ ಅಮೋಘ ಬ್ಯಾಟಿಂಗ್ ಮೂಲಕ ಆತಿಥೇಯ ತಂಡದಲ್ಲಿ ಲವಲವಿಕೆ ತುಂಬಿದರು. ಮನ್ವಂತ್ (ಬ್ಯಾಟಿಂಗ್ 86; 124ಎ) ಮತ್ತು ಅಭಿಲಾಷ್ ಶೆಟ್ಟಿ (ಬ್ಯಾಟಿಂಗ್ 6; 85ಎ) ಕ್ರೀಸ್‌ನಲ್ಲಿದ್ದಾರೆ. ಮನ್ವಂತ್ 65 ಎಸೆತಗಳಲ್ಲಿ ತಮ್ಮ ಚೊಚ್ಚಲ ಅರ್ಧಶತಕ ದಾಖಲಿಸಿದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Karnataka CricketRanji TrophyBengaluru


