BLR Today
ಶನಿವಾರ, ಅಕ್ಟೋಬರ್ 3, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಕ್ರೀಡೆBengaluru3 ಗಂಟೆಗಳ ಹಿಂದೆ

ಕಬಡ್ಡಿ: ಮಂಗಳೂರು ಇಂಡಿಯನ್ಸ್‌ ಜಯಭೇರಿ

ಕಬಡ್ಡಿ: ಮಂಗಳೂರು ಇಂಡಿಯನ್ಸ್‌ ಜಯಭೇರಿ
ಚಿತ್ರ: Prajavani

ಕಬಡ್ಡಿ: ಮಂಗಳೂರು ಇಂಡಿಯನ್ಸ್‌ ತಂಡವು ಶುಕ್ರವಾರ 33–32ರಿಂದ ಬೆಂಗಳೂರು ಬೈಸನ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ 21-14ರಲ್ಲಿ ಮುನ್ನಡೆ ಸಾಧಿಸಿದ್ದ ಮಂಗಳೂರು ತಂಡಕ್ಕೆ ದ್ವಿತೀಯಾರ್ಧದಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಇತರ ಪಂದ್ಯಗಳಲ್ಲಿ ವಿಜಯಪುರ ಲಯನ್ಸ್ ತಂಡ 38–34ರಿಂದ ಬೆಳಗಾವಿ ಬುಲ್ಸ್ ವಿರುದ್ಧ; ಹೊಯ್ಸಳ ಎಂಪೈರ್‌ ಹಾಸನ ತಂಡ 43–33ರಿಂದ ಚಾಲುಕ್ಯಸೇನೆ ಬಾಗಲಕೋಟೆ ತಂಡದ ವಿರುದ್ಧ ಗೆದ್ದವು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
sportsBengaluruKoramangala