ಬೆಂಗಳೂರಿನಲ್ಲಿ ಬೀದಿ ನಾಯಿಯ ಮೇಲೆ ಏರ್ ಗನ್‌ನಿಂದ ಕೃತ್ಯ, ಭಾರೀ ಆಕ್ರೋಶ
ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಕಳೆದ ಸೆಪ್ಟೆಂಬರ್ 20ರಂದು ಮಾದನಾಯಕನಹಳ್ಳಿಯ ಕಣ್ಣ ಲೇಔಟ್‌ನಲ್ಲಿ ಪ್ರಾಣಪ್ರಿಯರೊಬ್ಬರು ಬೀದಿ ನಾಯಿಗಳಿಗೆ ಆಹಾರ ಹಾಕುತ್ತಿದ್ದರು. ಈ ವೇಳೆ 65 ವರ್ಷದ ನಿವಾಸಿ ಎಸ್.ಕೃಷ್ಣಮೂರ್ತಿ ಎಂಬಾತ ಕೈಯಲ್ಲಿ ಏರ್ ಗನ್ ಹಿಡಿದು ನಿಂತಿದ್ದ. ನಾಯಿಗಳನ್ನು ನೋಡಿದ ಆತ ತನ್ನ ಏರ್ ಗನ್ ನಿಂದ ಗುಂಡೇಟು ಕೊಟ್ಟಿದ್ದಾನೆ. ಅದು ನಾಯಿ ಮರಿಗೆ ಬಂದು ತಗುಲಿದ್ದು, ಅದರ ಕುತ್ತಿಗೆ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿದೆ. ಪ್ರಾಣಿಪ್ರಿಯರಾದ ಸಿಂಧು ಮತ್ತು ಸಹನಾ ಕೂಡಲೇ ನಾಯಿಮರಿಯನ್ನು ಆಟೋದಲ್ಲಿ ತುಂಬಿಕೊಂಡು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಆರೋಪಿ ಕೃಷ್ಣಮೂರ್ತಿಯನ್ನು ತರಾಟೆಗೆ ತೆಗೆದುಕೊಂಡು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೂಲ ವರದಿ: Asianet Suvarna News
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruAnimal CrueltyCrime


