ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕದ್ದು ಓಡುತ್ತಿರುವ ದೃಶ್ಯ ಸಿಸಿಟಿವಿ ವಿಡಿಯೋ ನೋಡಿ
ಬೆಂಗಳೂರಿನ ಮಾಗಡಿ ರಸ್ತೆ ಬಿನ್ನಿಪೇಟೆ ಅಂಜನ್ ಚಿತ್ರಮಂದಿರ ಬಳಿ ವ್ಯಕ್ತಿಯೋರ್ವ ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕದ್ದೊಯ್ದ ಘಟನೆ ನಡೆದಿದೆ. ಇಂದು (ಅ.22) ಮಧ್ಯಾಹ್ನ ರಾಜರಾಜೇಶ್ವರಿ ಜ್ಯುವೆಲ್ಸ್ ಅಂಗಡಿಗೆ ಬಂದ ವ್ಯಕ್ತಿ, ಅಂಗಡಿ ಮಾಲೀಕರನ್ನು ಯಾಮಾರಿಸಿ 10 ಗ್ರಾಂ ಚಿನ್ನ ಕದ್ದುಕೊಂಡು ಹೋಗಿದ್ದಾನೆ. ಸಭ್ಯಸ್ತನ ರೀತಿ ಅಂಗಡಿಗೆ ಬಂದು 1.5 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಕಳ್ಳತನ ಮಾಡಿ ಓಡಿ ಹೋಗಿದ್ದು, ಕಳ್ಳನ ಕರಾಮತ್ತು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೂಲ ವರದಿ: TV9 Kannada
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeTheft


