BLR Today
ಶುಕ್ರವಾರ, ಅಕ್ಟೋಬರ್ 16, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ರಾಜಾನುಕುಂಟೆ ರೈಲು ನಿಲ್ದಾಣದ ಸಮೀಪ ರೈಲಿಗೆ ಸಿಲುಕಿ ವ್ಯಕ್ತಿ ಸಾವು

ರಾಜಾನುಕುಂಟೆ ರೈಲು ನಿಲ್ದಾಣದ ಸಮೀಪ ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಚಿತ್ರ: Prajavani

ದೊಡ್ಡಬಳ್ಳಾಪುರದಲ್ಲಿ ರಾಜಾನುಕುಂಟೆ ರೈಲು ನಿಲ್ದಾಣದ ಸಮೀಪ ಹಳಿಯಲ್ಲಿ ಸುಮಾರು 50 ವರ್ಷದ ಅಪರಿಚಿತ ಪುರುಷ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಚಹರೆ: ಸುಮಾರು 170 ಸೆಂ.ಮೀ ಎತ್ತರ, ಗೋದಿ ಮೈ ಬಣ್ಣ ಹೊಂದಿದ್ದು, ಕೋಲು ಮುಖ ನುಜ್ಜುಗುಜ್ಜಗಿದ್ದು ಸಾಧಾರಣ ಶರೀರ ಹೊಂದಿದ್ದು ಕಪ್ಪನೆಯ ಮೀಸೆ, ತಲೆಯಲ್ಲಿ ಕಪ್ಪು ಕೂದಲು ಇರುತ್ತವೆ. ಮೃತ ವ್ಯಕ್ತಿಯು ಪಿಂಕ್ ಬಣ್ಣದ ಆಫ್ ಟಿ ಶರ್ಟ್, ಕಪ್ಪು ಬಣ್ಣದ ಬನಿಯನ್, ಬೂದು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಅಂಡರ್ ವೇರ್ ಧರಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruDoddaballapuraCrimeAccident