BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru2 ದಿನಗಳ ಹಿಂದೆ

ಅಕ್ರಮ ಸಂಬಂಧ ಬಿಟ್ಟು ಹೋದ ಮಹಿಳೆ - ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

ಅಕ್ರಮ ಸಂಬಂಧ ಬಿಟ್ಟು ಹೋದ ಮಹಿಳೆ - ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ
ಚಿತ್ರ: Public TV

ಬೆಂಗಳೂರಿನ ಹನುಮಂತಸಾಗರ ಬಳಿ ಅಕ್ರಮ ಸಂಬಂಧ ಬಿಟ್ಟು ಹೋದ ಮಹಿಳೆ ಹಿನ್ನೆಲೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆಂಧ್ರದ ಇಂದುಪುರ ಜಿಲ್ಲೆ ಮೂಲದ ಪವನ್ ಕುಮಾರ್ (28) ಮೃತ ಯುವಕ. ಪವನ್ ನಾಗಮಣಿ ಎಂಬಾಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಒಂದು ವಾರದ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪವನ್ ಹನುಮಂತ ಸಾಗರದ ಬಳಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಸ್ಥಳೀಯರ ಸಹಾಯದಿಂದ ವಿಕ್ಟೋರಿಯಾ ಬರ್ನಿಂಗ್ ಸೆಕ್ಷನ್‌ಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ. ಇದೇ ಸುದ್ದಿ ವರದಿ ಮಾಡಿದ ಇತರ ಮಾಧ್ಯಮಗಳು: Kannada Prabha
BengaluruCrimeSuicide