ಲೋಕಾಯುಕ್ತ ಇನ್‌ಸ್ಪೆಕ್ಟರ್ ನಗರಸಭೆ ಕಡತ ಪರಿಶೀಲಿಸಿದರು
ಲೋಕಾಯುಕ್ತ ಇನ್‌ಸ್ಪೆಕ್ಟರ್ ರೇಣುಕಾ ಅವರು ಸೋಮವಾರ ನಗರಸಭೆ ಕಚೇರಿಗೆ ಭೇಟಿ ನೀಡಿ, ಕಡತಗಳ ಪರಿಶೀಲನೆ ನಡೆಸಿದರು. ಎಂ.ಜಿ.ಮಾರುಕಟ್ಟೆ ಬಾಡಿಗೆ ವಿಷಯದಲ್ಲಿ ₹3 ಕೋಟಿ ಬಾಕಿ ಇದ್ದರೂ, ಅದನ್ನು ನಗರಸಭೆಯಿಂದ ವಸೂಲಿ ಮಾಡದೆ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಸಾರ್ವಜನಿಕರು ದೂರಿದ್ದರು. ನಗರಸಭೆಯಿಂದ ನೀಡಿದ ಮನೆ ನಿರ್ಮಾಣ ಅನುದಾನದಲ್ಲಿ ಲೋಪ ನಡೆದಿದೆ ಎಂದು ಸಹ ದೂರಲಾಗಿತ್ತು. ಈ ಸಂದರ್ಭದಲ್ಲಿ ಎಂ.ಜಿ.ಮಾರುಕಟ್ಟೆಯಲ್ಲಿ ಎಷ್ಟು ಅಂಗಡಿಗಳಿವೆ, ಅವುಗಳಿಂದ ಎಷ್ಟು ಬಾಡಿಗೆ ಬರುತ್ತಿದೆ, ನಗರಸಭೆಯಲ್ಲಿ ಒಟ್ಟು ಎಷ್ಟು ಆಸ್ತಿ ಇದೆ ಎಂಬ ಮಾಹಿತಿ ಪಡೆಯಲಾಯಿತು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
LokayuktaBengaluruCity CouncilMG Market


