ಬೆಂಗಳೂರು ದಕ್ಷಿಣದಲ್ಲಿ ಚಿರತೆ ಕೋಳಿ ಫಾರಂಗೆ ನುಗ್ಗಿ ಯುವಕನ ಮೇಲೆ ದಾಳಿ
ಬೆಂಗಳೂರು ದಕ್ಷಿಣದ ಚನ್ನಪಟ್ಟಣ ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆಗಳ ಉಪಟಳ ಮಿತಿಮೀರಿದ್ದು, ಒಂದೇ ದಿನ ಎರಡು ಕಡೆ ಪ್ರತ್ಯಕ್ಷವಾಗಿ ದಾಳಿ ನಡೆಸುವ ಮೂಲಕ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಭೀತಿ ಹುಟ್ಟಿಸಿದೆ. ಕೋಳಿ ಫಾರಂಗೆ ನುಗ್ಗಿ ನೂರಾರು ಕೋಳಿಗಳನ್ನು ತಿಂದು ಹಾಕಿರುವ ಚಿರತೆ, ಮಾಲೀಕನ ಮೇಲೂ ದಾಳಿಗೆ ಯತ್ನಿಸಿದೆ. ಮತ್ತೊಂದೆಡೆ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ಮೇಲೆಲೂ ದಾಳಿ ನಡೆಸಿ ಗಾಯಗೊಳಿಸಿದೆ.
ಮೂಲ ವರದಿ: Asianet Suvarna News
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBengaluru SouthChannapattanaLeopardWildlifeAnimal Attack


