ಬಟಾನಿಕಲ್ ಪಾರ್ಕ್‌ಗೆ ಮೀಸಲಿಟ್ಟ ಜಾಗ ಒತ್ತುವರಿಯಾಗಲು ಬಿಡುವುದಿಲ್ಲ
ಬಟಾನಿಕಲ್ ಪಾರ್ಕ್‌ಗೆ ಮೀಸಲಿಟ್ಟ ಜಾಗ ಒತ್ತುವರಿಯಾಗಲು ಬಿಡುವುದಿಲ್ಲ
ಚಂದಾಪುರ (ಆನೇಕಲ್): ಬಟಾನಿಕಲ್ ಪಾರ್ಕ್‌ಗೆ ಮೀಸಲಿಟ್ಟ ಜಾಗವಾದ ಜಿಗಣಿ ಸಮೀಪದ ಹೆನ್ನಾಗರ ಸರ್ವೆ ನಂ.5ರ 52 ಎಕರೆ ಭೂಮಿಯನ್ನು ಯಾವುದೇ ಉದ್ದೇಶಕ್ಕಾಗಿ ಬಳಸಲು ಬಿಡುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ 18 ಕಿ.ಮೀ. ಒಳಗೆ ಇರುವುದರಿಂದ ಬಗರ್‌ಹುಕುಂ ಸಾಗುವಳಿಯಡಿಯಲ್ಲಿ ಭೂಮಿ ಪಡೆಯಲು ಹಕ್ಕು ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಹೈಕೋರ್ಟ್ ಸಹ ಅರಣ್ಯ ಇಲಾಖೆಯ ಭೂಮಿಯ ಒತ್ತುವರಿ ತೆರವು ಮಾಡುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು. ಬಟಾನಿಕಲ್ ಪಾರ್ಕ್ ನಿರ್ಮಾಣಕ್ಕೆ ಮೀಸಲಿಟ್ಟ ಜಾಗಕ್ಕೆ ಇದೇ ವಾರದಲ್ಲಿ ಅರಣ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು. 10 ಕಡೆ ಟ್ರೀ ಪಾರ್ಕ್, ಚಾರಣ ಅರಣ್ಯ ಇಲಾಖೆಯಿಂದ ಬೆಂಗಳೂರಿನ ಹತ್ತು ಕಡೆ ಟ್ರೀ ಪಾರ್ಕ್ ಹಾಗೂ ಜಾಗ ಇರುವ ಕಡೆಗಳಲ್ಲಿ ಟ್ರಕಿಂಗ್‌ಗೂ ಅನುಕೂಲವಾಗುವಂತೆ ಅರಣ್ಯ ಇಲಾಖೆಯಿಂದ ವ್ಯವಸ್ಥೆ ಮಾಡಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ಪಣತ್ತೂರಿನಲ್ಲಿ ಟ್ರೀ ಪಾರ್ಕ್ ಸ್ಥಾಪನೆಯಾಗಿದೆ. ಬೆಂಗಳೂರಿನ ಲಾಲ್‌ಬಾಗ್ 240, ಕಬ್ಬನ್ ಪಾರ್ಕ್ 10, 1.4 ಕೋಟಿ ಜನಸಂಖ್ಯೆಯಿದ್ದು ಜನಸಂಖ್ಯೆಗೆ ಅನುಗುಣವಾಗಿ ಅವಶ್ಯಕತೆಯಿರುವೆಡೆ ಉದ್ಯಾನ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು. ಕಲ್ಕೆರೆಯಲ್ಲಿ 100 ಎಕರೆ, ಗುಂಜೂರು ಬಳಿ 150ಎಕರೆ, ಬೆಂಗಳೂರು ಉತ್ತರ ಮತ್ತು ತೂರಹಳ್ಳಿ ಬಳಿ ಇರುವ ಅರಣ್ಯ ಇಲಾಖೆ ಜಾಗದಲ್ಲಿ ಉದ್ಯಾನ ನಿರ್ಮಿಸಲಾಗುವುದು ಎಂದು ತಿಳಿಸಿದರು.

