BLR Today
ಶನಿವಾರ, ಅಕ್ಟೋಬರ್ 10, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ದಸರಾ ಪ್ರಯಾಣಿಕರಿಗೆ ಕೆಎಸ್ಸಾರ್ಟಿಸಿ ಬೃಹತ್ ಯೋಜನೆ

ದಸರಾ ಪ್ರಯಾಣಿಕರಿಗೆ ಕೆಎಸ್ಸಾರ್ಟಿಸಿ ಬೃಹತ್ ಯೋಜನೆ
ಚಿತ್ರ: Asianet Suvarna News

ದಸರಾ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅ. 16ರಿಂದ 20ರವರೆಗೆ ಕೆಎಸ್ಸಾರ್ಟಿಸಿ ಮೂರು ಸಾವಿರ ಹೆಚ್ಚುವರಿ ಬಸ್ ಸೇವೆ ನೀಡಲಿದೆ. ಅ.16ರ ಶುಕ್ರವಾರ ರಾತ್ರಿಯಿಂದ ಅ.20ರವರೆಗೆ ಮೆಜೆಸ್ಟಿಕ್, ಮೈಸೂರು ರಸ್ತೆ, ಶಾಂತಿನಗರ ಬಸ್ ನಿಲ್ದಾಣಗಳಿಂದ ಹೆಚ್ಚುವರಿಯಾಗಿ ಮೂರು ಸಾವಿರ ಬಸ್ ಗಳು ಸಂಚರಿಸಲಿವೆ. ಈ ಹೆಚ್ಚುವರಿ ಬಸ್ ಗಳು ಅ. 20 ಮತ್ತು 21ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಾಪಾಸಾಗಲಿವೆ. ದಸರಾ ಹಬ್ಬ ವೀಕ್ಷಣೆಗೆ ಮೈಸೂರಿಗೆ ತೆರಳುವವರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೆಚ್ಚುವರಿಯಾಗಿ 700 ಬಸ್ ಗಳು ಸೇವೆ ನೀಡಲಿವೆ. ಅದರಲ್ಲಿ ಬೆಂಗಳೂರಿನ ಮೈಸೂರು ರಸ್ತೆಯಿಂದ ಮೈಸೂರು ನಗರಕ್ಕೆ 300 ಬಸ್ ಗಳು ಹಾಗೂ ಮೈಸೂರು ಸುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಸ್ಥಳಗಳಿಗೆ 400 ಬಸ್ ಗಳು ಸೇವೆ ನೀಡಲಿವೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KSRTCDasaraBengaluruBus Services