BLR Today
ಸೋಮವಾರ, ನವೆಂಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru59 ನಿಮಿಷಗಳ ಹಿಂದೆ

‘ಕೃಷ್ಣೆಯಿಂದ ಕಾವೇರಿವರೆಗೆ’ ಉತ್ಸವಕ್ಕೆ ತೆರೆ: ಚಿಣ್ಣರು ಹಚ್ಚಿದರು ‘ಕನ್ನಡದ ದೀಪ’

‘ಕೃಷ್ಣೆಯಿಂದ ಕಾವೇರಿವರೆಗೆ’ ಉತ್ಸವಕ್ಕೆ ತೆರೆ: ಚಿಣ್ಣರು ಹಚ್ಚಿದರು ‘ಕನ್ನಡದ ದೀಪ’
ಚಿತ್ರ: Prajavani

ಇಮ್ತಿಯಾಜ್ ಸುಲ್ತಾನ್ ಅವರ ಗಜಲ್‌, ಅಪ್ಪಗೆರೆ ತಿಮ್ಮರಾಜು ಅವರ ಜನಪದ ಗಾಯನ ಮತ್ತು ರಾಘವೇಂದ್ರ ಹೆಗ್ಡೆ ಪ್ರಸ್ತುತಿಯ ‘ಮರಳು ಮಾಧುರ್ಯ’ ಕಾರ್ಯಕ್ರಮದೊಂದಿಗೆ ‘ಕೃಷ್ಣೆಯಿಂದ ಕಾವೇರಿವರೆಗೆ’ ಉತ್ಸವಕ್ಕೆ ವೈಭವದ ತೆರೆ ಬಿತ್ತು. ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಅಜೀಂಪ್ರೇಮ್‌ಜಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಎರಡು ದಿನಗಳ ಉತ್ಸವವು ಕರುನಾಡಿನ ಬಹುವೈವಿಧ್ಯ ಲೋಕವನ್ನು ಸಹೃದಯರಿಗೆ ತೆರೆದಿಟ್ಟಿತು. ಈ ಸಂದರ್ಭದಲ್ಲಿ ದೀಪಗಳನ್ನು ಬೆಳಗಿ ‘ಕನ್ನಡ ದೀಪಾವಳಿ’ಯನ್ನು ಆಚರಿಸಿ ಸಂಭ್ರಮಿಸಿದರು. ಪಗಡೆ, ಅಳಿಗುಳಿ ಮನೆ, ಹಾವು– ಏಣಿ ಸೇರಿದಂತೆ ದೇಸಿ ಆಟಗಳಲ್ಲಿ ಚಿಣ್ಣರೊಂದಿಗೆ ದೊಡ್ಡವರು ಸೇರಿ ಆಟವಾಡಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruKarnataka RajyotsavaCultureFestival