BLR Today
ಶುಕ್ರವಾರ, ಅಕ್ಟೋಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಕೆಪಿಎಸ್ಸಿ ಹಗರಣ: ಅಕ್ರಮದ ಹಣದಲ್ಲಿ ಫ್ಲೈಟ್ ಟಿಕೆಟ್ ಬುಕ್ಕಿಂಗ್ ಸೇರಿ ಹಲವು ಪ್ರಮುಖ ವಿಚಾರಗಳು ಪತ್ತೆ

ಕೆಪಿಎಸ್ಸಿ ಹಗರಣ: ಅಕ್ರಮದ ಹಣದಲ್ಲಿ ಫ್ಲೈಟ್ ಟಿಕೆಟ್ ಬುಕ್ಕಿಂಗ್ ಸೇರಿ ಹಲವು ಪ್ರಮುಖ ವಿಚಾರಗಳು ಪತ್ತೆ
ಚಿತ್ರ: TV9 Kannada

ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿನ ಹಗರಣ ಸಂಬಂಧ ಮತ್ತಷ್ಟು ವಿಚಾರಗಳು ತನಿಖೆ ವೇಳೆ ಬಯಲಾಗಿವೆ. ಕೆಪಿಎಸ್ಸಿ ಅಕ್ರಮ ಹಣದಲ್ಲಿ ಶಿವಶಂಕರಪ್ಪ ಸಾಹುಕಾರ್ ಮತ್ತು ಬಿ.ವಿ.ಗೀತಾಗೆ ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮಾಡಿರೋದು ಇಡಿ ಅಧಿಕಾರಿಗಳ ತನಿಖೆ ವೇಳೆ ಗೊತ್ತಾಗಿದೆ. ಮೈ ಟ್ರಾವೆಲ್ ಏರ್ ಹಾಗೂ ಏಜೆಂಟ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಲಾಗಿತ್ತು ಎಂದು ಇಡಿ ವಿಚಾರಣೆ ವೇಳೆ ಶಿವಶಂಕರಪ್ಪ ಸಾಹುಕಾರ್ ಪಿಎ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಈ ಹಗರಣದ ಬಗ್ಗೆ ಸುಳಿವು ನೀಡಿದ್ದೇ ಅಭ್ಯರ್ಥಿಗಳ ಅಂಕ ಪಟ್ಟಿ. ಶಿವಶಂಕರಪ್ಪ ಮತ್ತು ಗೀತಾ ಜೊತೆಗೆ ನಂದೀಶ್, ವಿನುತಾ ಸತತ ಸಂಪರ್ಕದಲ್ಲಿದ್ದರು. ಈ ಸಂಬಂಧ ಸಿಡಿಆರ್, ಸಿಸಿಟಿವಿ, ವಾಟ್ಸ್​​ಆ್ಯಪ್​​ ಸಂಭಾಷಣೆ ಪತ್ತೆಯಾಗಿತ್ತು. ಹೀಗಾಗಿ ವಿನುತಾ ಹಾಗೂ ನಂದೀಶ್ ಮಾರ್ಕ್ಸ್​​ ಕಾರ್ಡ್​​ ಪರಿಶೀಲನೆ ನಡೆಸಿದಾಗ ಆರೋಪಿಗಳ ಕಳ್ಳಾಟ ಬಯಲಾಗಿದೆ ಎನ್ನಲಾಗಿದೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KPSCscamBengaluru