BLR Today
ಶುಕ್ರವಾರ, ಅಕ್ಟೋಬರ್ 16, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಕೆಪಿಎಸ್ಸಿ ಹಗರಣ: ಅಭ್ಯರ್ಥಿಗಳ ಕಳ್ಳಾಟದ ಬ್ರಹ್ಮಾಂಡ ಸೀಕ್ರೆಟ್ ಬಯಲು

ಕೆಪಿಎಸ್ಸಿ ಹಗರಣ: ಅಭ್ಯರ್ಥಿಗಳ ಕಳ್ಳಾಟದ ಬ್ರಹ್ಮಾಂಡ ಸೀಕ್ರೆಟ್ ಬಯಲು
ಚಿತ್ರ: TV9 Kannada

ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದ ಅಕ್ರಮಗಳು ಬಯಲಾಗುತ್ತಿವೆ. ಈ ಪ್ರಕರಣದ ಸಂಬಂಧ ಇಡಿ ತನಿಖೆಯಲ್ಲಿ ಅಕ್ರಮದಲ್ಲಿ ಶಾಮೀಲಾದ ಅಭ್ಯರ್ಥಿಗಳ ಎಕ್ಸಾಂ ಸೀಕ್ರೆಟ್ ಬಯಲಾಗಿದೆ. ಕೆಪಿಎಸ್ಸಿಯ ಕೆಲ ಸದಸ್ಯರೇ ಅಭ್ಯರ್ಥಿಗಳಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಪರೀಕ್ಷೆ ಬರೆಸಿದ್ದಾರೆ ಎಂಬ ಮಾಹಿತಿ ಇಡಿಗೆ ಲಭ್ಯವಾಗಿದೆ. ಇಡಿ ತನಿಖೆಯಲ್ಲಿ, ಇಂಗ್ಲಿಷ್‌ನಲ್ಲಿ ಹೆಸರು ಮತ್ತು ವಿಳಾಸ ಬರೆಯಲು ಬಾರದ ವ್ಯಕ್ತಿಗಳು ಸಹ ಸರ್ಕಾರಿ ಉದ್ಯೋಗ ಪಡೆಯುವಂತೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KPSCEDScamBengaluru