BLR Today
ಭಾನುವಾರ, ಅಕ್ಟೋಬರ್ 4, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ಗಂಟೆಗಳ ಹಿಂದೆ

ಕೆಪಿಎಸ್‌ಸಿ ಹಗರಣ: ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಸಂಗ್ರಹಿಸಿದ್ದ ಹಣದಲ್ಲಿ 1.30 ಕೋಟಿ ರೂ. ಜ್ಞಾನೇಂದ್ರಗೆ ನೀಡಿದ್ದ ಕನ್ನಾಳೆ

ಕೆಪಿಎಸ್‌ಸಿ ಹಗರಣ: ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಸಂಗ್ರಹಿಸಿದ್ದ ಹಣದಲ್ಲಿ 1.30 ಕೋಟಿ ರೂ. ಜ್ಞಾನೇಂದ್ರಗೆ ನೀಡಿದ್ದ ಕನ್ನಾಳೆ
ಚಿತ್ರ: TV9 Kannada

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಮತ್ತಷ್ಟು ವಿಚಾರ ಬೆಳಕಿಗೆ ಬಂದಿದೆ. ಪ್ರಶ್ನೆಪತ್ರಿಕೆ ಸೋರಿಕೆಮಾಡಿ ಅಭ್ಯರ್ಥಿಗಳಿಂದ 1.50 ಕೋಟಿ ಹಣ ಸಂಗ್ರಹಿಸಿದ್ದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ, ಆ ಪೈಕಿ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ IAS ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ 1.30 ಕೋಟಿ ಹಣವನ್ನ ನಗದು ರೂಪದಲ್ಲಿ ನೀಡಿದ್ದ. ಜನವರಿ 9ರಂದು ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ನಡೆದಿತ್ತಾದರೂ, ಜನವರಿ 7ರಂದೇ ಕನ್ನಾಳೆಗೆ ಪ್ರಶ್ನೆಪತ್ರಿಕೆ ಮತ್ತು ಉತ್ತರವನ್ನು ಜ್ಞಾನೇಂದ್ರ ನೀಡಿದ್ದರು ಎಂಬುದು ಇಡಿ ತನಿಖೆ ವೇಳೆ ಗೊತ್ತಾಗಿದೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KPSCscamcorruptionBengaluru