Bengaluru Today
ಸೋಮವಾರ, ಸೆಪ್ಟೆಂಬರ್ 21, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ದಿನಗಳ ಹಿಂದೆ

ಕೆಪಿಎಸ್ಸಿ ಕರ್ಮಕಾಂಡದ ಮತ್ತಷ್ಟು ಸ್ಫೋಟಕ ಸಂಗತಿ ಬಯಲು: ಅಕ್ರಮದ ಹಣದಲ್ಲಿ ಗೆಳತಿಯೊಂದಿಗೆ ಮೋಜು ಮಸ್ತಿ

ಕೆಪಿಎಸ್ಸಿ ಕರ್ಮಕಾಂಡದ ಮತ್ತಷ್ಟು ಸ್ಫೋಟಕ ಸಂಗತಿ ಬಯಲು: ಅಕ್ರಮದ ಹಣದಲ್ಲಿ ಗೆಳತಿಯೊಂದಿಗೆ ಮೋಜು ಮಸ್ತಿ
ಚಿತ್ರ: TV9 Kannada

ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಅಕ್ರಮದ ದುಡ್ಡಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ ಕುಮಾರ್ ಮೋಜು-ಮಸ್ತಿ ಬಯಲಾಗಿದೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ, ಜ್ಞಾನೇಂದ್ ಕುಮಾರ್ ಮೆಚ್ಚಿಸಲು ಖರ್ಚುಗಳಿಗೆ ಸುಮಾರು 11 ಲಕ್ಷ ವೆಚ್ಚ ಭರಿಸಿದ್ದಾನೆ. ಜ್ಞಾನೇಂದ್ ಕುಮಾರ್ ಮಾರ್ಚ್ ಮತ್ತು ಜೂನ್ ನಲ್ಲಿ ಗೆಳತಿಗಾಗಿ 52 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಡೈಮಂಡ್‌ ಖರೀದಿ ಮಾಡಿದ್ದಾರೆ. ಭೀಮಾ ಜ್ಯೂವೆಲ್ಲರಿ ಗೆ ಹಣ ವರ್ಗಾಯಿಸಲು ಬಸವರಾಜ್ ಕನ್ನಾಳೆ ಸ್ನೇಹಿತರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನ ತೆರೆರುವುದು ತನಿಖೆ ವೇಳೆ ಪತ್ತೆಯಾಗಿದೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KPSCIASCorruptionBengaluru