BLR Today
ಭಾನುವಾರ, ಅಕ್ಟೋಬರ್ 25, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಕೆಇಎ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ಕೆಇಎ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಚಿತ್ರ: Prajavani

ಪೌರಾಡಳಿತ ನಿರ್ದೇಶನಾಲಯ, ಇಎಸ್ಐ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದೆ. ನ.6, ನ.7 ಮತ್ತು ನ.14ರಂದು ನಿರ್ದಿಷ್ಟ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಪೌರಾಡಳಿತ ನಿರ್ದೇಶನಾಲಯದ ಎಲೆಕ್ಟ್ರೀಷಿಯನ್ ಗ್ರೇಡ್- 1 (3 ಹುದ್ದೆ) ಮತ್ರು ಗ್ರೇಡ್- 2 (5 ಹುದ್ದೆ) ಹುದ್ದೆಗಳಿಗೆ ನ.6ರಂದು ನಿರ್ದಿಷ್ಟ ಪತ್ರಿಕೆಯ ಲಿಖಿತ ಪರೀಕ್ಷೆ ಇರಲಿದೆ. ಇಎಸ್ಐ ನ ಫಾರ್ಮಸಿ ಅಧಿಕಾರಿ (11 ಹುದ್ದೆ) ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ- 23 ಹುದ್ದೆ) ಹಾಗೂ ನರ್ಸಿಂಗ್ ಅಧಿಕಾರಿ (11) ಹುದ್ದೆಗಳಿಗೆ ನ.7ರಂದು ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ನಡೆಯಲಿದೆ. ಪೌರಾಡಳಿತ ನಿರ್ದೇಶನಾಲಯದ ನೀರು ಸರಬರಾಜು ಆಪರೇಟರ್ (122 ಹುದ್ದೆ) ಹಾಗೂ ಸಹಾಯಕ ನೀರು ಸರಬರಾಜು ಆಪರೇಟರ್ (80 ಹುದ್ದೆ) ಹುದ್ದೆಗಳಿಗೆ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ನ.14ರಂದು ನಡೆಯಲಿದೆ. ಅಂದು ಮಧ್ಯಾಹ್ನದ ನಂತರ ಈ ಎಲ್ಲ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationJobsExam