BLR Today
ಬುಧವಾರ, ಅಕ್ಟೋಬರ್ 7, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 29-30ರಂದು ಮೈಕ್ರೋಪ್ಲಾಸ್ಟಿಕ್ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 29-30ರಂದು ಮೈಕ್ರೋಪ್ಲಾಸ್ಟಿಕ್ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ
ಚಿತ್ರ: Prajavani

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ತನ್ನ ಕೇಂದ್ರದಲ್ಲಿ ಇದೇ 29 ಮತ್ತು 30 ರಂದು ಮೈಕ್ರೋಪ್ಲಾಸ್ಟಿಕ್ ಕುರಿತು ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ. ಈ ಸಮ್ಮೇಳನದಲ್ಲಿ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದಾರೆ. ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು ಮತ್ತು ಯುವ ಉದ್ಯಮಿಗಳು ಭಾಗವಹಿಸಬಹುದಾಗಿದೆ. ಆಸಕ್ತರು ಇದೇ 20 ರೊಳಗೆ https://forms.gle/G8jzPbRczYY5jYXWA ಮೂಲಕ ನೋಂದಾಯಿಸಿ ಕೊಳ್ಳಬೇಕು. ವಿವರಕ್ಕೆ ಅಕಾಡೆಮಿ ವೆಬ್‌ಸೈಟ್ https://kstacademy.in ಅಥವಾ ಮೊಬೈಲ್ ಸಂಖ್ಯೆ: 9620767819/ 9743084194ಕ್ಕೆ ಸಂಪರ್ಕಿಸಬಹುದು ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
scienceeducationconference