ಬಿಎಸಿಐ ಸೀನಿಯರ್ ಮಹಿಳೆಯರ ಟಿ20 ಟ್ರೋಫಿ ಎಲೀಟ್ ಟೂರ್ನಿಯಲ್ಲಿ ಕರ್ನಾಟಕ ಮಹಾರಾಷ್ಟ್ರವನ್ನು 7 ವಿಕೆಟ್‌ಗಳಿಂದ ಸೋಲಿಸಿತು
ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಐದು ವಿಕೆಟ್ ಗೊಂಚಲು ಪಡೆದರೆ, ಎಡಗೈ ವೇಗಿ ಮೋನಿಕಾ ಸಿ. ಪಟೇಲ್ ನಾಲ್ಕು ವಿಕೆಟ್ ಗಳಿಸಿದರು. ಇವರಿಬ್ಬರ ಅಮೋಘ ಬೌಲಿಂಗ್ ಬಲದಿಂದ ಕರ್ನಾಟಕ ತಂಡ ಬಿಸಿಸಿಐ ಸೀನಿಯರ್ ಮಹಿಳೆಯರ ಟಿ20 ಟ್ರೋಫಿ ಎಲೀಟ್ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕಿ ಶುಭಾ ಸತೀಶ್ ಬೌಲಿಂಗ್ ಆಯ್ಕೆಮಾಡಿಕೊಂಡರು. ಶ್ರೇಯಾಂಕಾ (26ಕ್ಕೆ5) ಮತ್ತು ಮೋನಿಕಾ (18ಕ್ಕೆ4) ಎದುರಾಳಿ ತಂಡವನ್ನು ಕೇವಲ 114 ರನ್‌ಗಳಿಗೆ ಕಟ್ಟಿಹಾಕಿದರು. ಹೊಣೆಯಿಂದ ಆಡಿದ ಶುಭಾ (ಔಟಾಗದೇ 53; 49ಎ, 4x5) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಕರ್ನಾಟಕ 15.2 ಓವರ್‌ಗಳಲ್ಲಿ 3ಕ್ಕೆ 115 ರನ್ ಗಳಿಸಿ, ಸಂಭ್ರಮಿಸಿತು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KarnatakaCricketBengaluru

