ಕರ್ನಾಟಕ ಸೈಬರ್ ಕಮಾಂಡ್ ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್ ತನಿಖೆಯಿಂದ ಇನ್ನೆರಡು ಅಂತಾರಾಜ್ಯ ಜಾಲಗಳನ್ನು ಬಯಲಿಗೆಳೆದಿದೆ
ಬೆಂಗಳೂರಿನ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದ ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಜ್ಯ ಪೊಲೀಸ್ ಸೈಬರ್ ಕಮಾಂಡ್ ಘಟಕವು ಇನ್ನೂ ಎರಡು ಅಂತಾರಾಜ್ಯ ಜಾಲಗಳನ್ನು ಬಯಲಿಗೆಳೆದಿದೆ. ಬಂಧಿತರಾಗಿರುವ ಆರೋಪಿಗಳ ತನಿಖೆಯ ವೇಳೆ ದೊರೆತ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ತಮಿಳುನಾಡಿನ ತಿರುಚ್ಚಿ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇನ್ನೂ ಎರಡು ಸಿಮ್ ಫಾರ್ಮ್ ತಾಣಗಳನ್ನು ಪತ್ತೆ ಹಚ್ಚಿದೆ. ಈ ಜಾಲದ ಮೇಲೆ ದಾಳಿ ನಡೆಸಿದ್ದ ಸೈಬರ್ ಕಮ್ಯಾಂಡ್ ಘಟಕದ ಸಿಬ್ಬಂದಿ ಒಟ್ಟು 10 ಸಿಮ್ ಬಾಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದ್ದರು.
ಮೂಲ ವರದಿ: TV9 Kannada
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCyber CrimeSIM BoxKadugodiPattandur Agrahara


