ಬೆಂಗಳೂರಿನ ಕರಾಟೆ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕ ಗೆದ್ದರು
ಇಟಲಿಯಲ್ಲಿ ಲಿಗ್ನಾನೊ ಸಬ್ಬಿಯೊಡೊರೊದಲ್ಲಿ ನಡೆದ ಕರಾಟೆ ಸ್ಪರ್ಧೆಗಳಲ್ಲಿ ಬೆಂಗಳೂರಿನ ಕರಾಟೆ ಪಟುಗಳು ಅಮೋಘ ಸಾಧನೆ ಮಾಡಿದ್ದಾರೆ. ಜಪಾನ್ ಶೋಟೋಕಾನ್ ಕರಾಟೆ-ಡೋ ಇಂಡಿಯಾ ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್‌ಷಿಪ್ ಮತ್ತು ಕರಾಟೆ ಕಪ್ ಸ್ಪರ್ಧೆಗಳಲ್ಲಿ ಬೆಂಗಳೂರಿನ ಕ್ಲಾರೆಟ್ಸ್ ಯೂನಿವರ್ಸಿಟಿಯ ಗಗನಾ ಸತೀಶ್ ತಲಾ 2 ಚಿನ್ನ ಮತ್ತು ಕಂಚಿನ ಪದಕಗಳಿಗೆ ಕೊರಳೊಡ್ಡಿದರು. ಸಿಂಧಿ ಪ್ರೌಢಶಾಲೆಯ ಲಕ್ಷ್ಮಣ್ ನೀಲಕಂಠನ್ (1 ಚಿನ್ನ, 1 ಕಂಚು), ಇಷಿತಾ ನಾಗರಾಜ್ (1 ಬೆಳ್ಳಿ) ಕ್ರೈಸ್ಟ್ ಪ್ರೌಢಶಾಲೆಯ ಮೋಹಿತ್ ರಾವ್ (1 ಚಿನ್ನ ಮತ್ತು 1 ಕಂಚು), ಏವಿಯೇಷನ್ ಶಾಲೆಯ ಮೋಹನಾ ತಾಳಡಿ (1 ಚಿನ್ನ, 3 ಕಂಚು), ಕ್ಲೂನಿ ಕಾನ್ವೆಂಟ್‌ನ ಚಾರ್ವಿ ಸಿಂಪ್ಸನ್ (2 ಕಂಚು), ನಿರ್ಮಲಾ ರಾಣಿ ಪ್ರೌಢಶಾಲೆಯ ಮಹಾಲಕ್ಷ್ಮಿ (ಕಂಚು) ಪದಕಗಳನ್ನು ಗೆದ್ದರು. ಕೋಚ್‌ಗಳಾದ ಮಹಾಲಕ್ಷ್ಮಿ ವರುಣ್, ಕಸ್ತೂರಿ ಪಾಲ್ಗೊಂಡಿದ್ದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
sportseducationinternational


