BLR Today
ಬುಧವಾರ, ಅಕ್ಟೋಬರ್ 7, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru2 ಗಂಟೆಗಳ ಹಿಂದೆ

ಕನ್ನಡ ಸಾಹಿತ್ಯ ಪರಿಷತ್ತು 2025 ಹಾಗೂ 2026ನೇ ಸಾಲಿನ ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ ಪ್ರಕಟಿಸಿದೆ

ಕನ್ನಡ ಸಾಹಿತ್ಯ ಪರಿಷತ್ತು 2025 ಹಾಗೂ 2026ನೇ ಸಾಲಿನ ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ ಪ್ರಕಟಿಸಿದೆ
ಚಿತ್ರ: Prajavani

ಕನ್ನಡ ಸಾಹಿತ್ಯ ಪರಿಷತ್ತು 2025 ಹಾಗೂ 2026ನೇ ಸಾಲಿನ ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ ಪ್ರಕಟಿಸಿದೆ. ಕನ್ನಡ ಪರ ಹೋರಾಟಗಾರ ತ.ನ. ಪ್ರಭುದೇವ, ಲೇಖಕ ದ್ವಾರನಕುಂಟೆ ಪಾತಣ್ಣ, ರಂಗಕರ್ಮಿ ಮಹಾದೇವ ಹಡಪದ, ಮಂಜುಳಾ ಮೋಹನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಹಾಗೂ ರಂಗಭೂಮಿ ಕಲಾವಿದೆ ಸಹನಾ ಪಿಂಜಾರ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡಅವರು ಈ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿ ದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Kannada Sahitya ParishatiKannada LiteratureAwardsBengaluru