BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru4 ದಿನಗಳ ಹಿಂದೆ

ಕನ್ನಡ ಗಂಧ ಗ್ರಂಥಾಲಯದ ಉತ್ತಮ ಪುಸ್ತಕ ಬಹುಮಾನಗಳು ಪ್ರಕಟ

ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತ ಮಾನೋತ್ಸವದ ಅಂಗವಾಗಿ ವಸಂತಪುರದ ಮಾರುತಿ ಬಡಾವಣೆಯ ಕನ್ನಡ ಗಂಧ ಗ್ರಂಥಾಲಯ ಉತ್ತಮ ಪುಸ್ತಕ ಬಹುಮಾನವನ್ನು ಪ್ರಕಟಿಸಿದೆ. ಕವನ ಸಂಕಲನ ವಿಭಾಗದಲ್ಲಿ ಸುನೀತಾ ಗಣಪತಿ ಅವರ ‘ಭಾವವೀಣೆ ಮೀಟಿದಾಗ’ ಕೃತಿ ಪ್ರಥಮ, ಎ. ರಘುರಾಮ್ ಅವರ ‘ಕನಸೆಂಬ ಕಾಮನಬಿಲ್ಲು’ ಕೃತಿ ದ್ವಿತೀಯ, ಅಜಿತ್ ಹರೀಶಿ ಅವರ ‘ತೇಲಿಬಿಟ್ಟ ಆತ್ಮಬುಟ್ಟಿ’ ಕೃತಿ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ. ಕಥಾ ಸಂಕಲನ ವಿಭಾಗದಲ್ಲಿ ತಿಮ್ಮಣ್ಣ ಭಟ್ ಅವರ ‘ಒಂದು ಡಜನ್ ಕಥೆಗಳು’ ಕೃತಿ ಪ್ರಥಮ, ಲಕ್ಷ್ಮಿದೇವಿ ಪತ್ತಾರ ಅವರ ‘ಬಿಳಿಮ್ಯಾಗ್ನೆಟ್ ಹಳದಿ ಬಂಗಾರ’ ಕೃತಿ ದ್ವಿತೀಯ, ಪದ್ಮಾ ಆನಂದ್ ಅವರ ‘ನೋಂಪಿ’ ಕೃತಿ ತೃತೀಯ ಬಹುಮಾನಕ್ಕೆ ಭಾಜನವಾಗಿವೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruLiteratureAwardsKannada