ಬೆಂಗಳೂರಿನಲ್ಲಿ ಪತ್ರಕರ್ತೆ, ಸಂಗೀತ ವಿದ್ವಾಂಸೆ ಶಕುಂತಲಾ ನರಸಿಂಹನ್ ನಿಧನ
ಖ್ಯಾತ ಪತ್ರಕರ್ತೆ, ಅಂಕಣಕಾರ್ತಿ ಹಾಗೂ ಸಂಗೀತ ವಿದ್ವಾಂಸೆ ಶಕುಂತಲಾ ನರಸಿಂಹನ್ (86) ಅವರು ವಯೋಸಹಜ ಕಾಯಿಲೆಗಳಿಂದಾಗಿ ಬುಧವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಹಲಸೂರಿನ ಕೇರ್ ಹೋಮ್‌ನಲ್ಲಿ ಬುಧವಾರ ಬೆಳಿಗ್ಗೆ 5:15 ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪ್ರೊ. ಶೋಭನಾ ನರಸಿಂಹನ್ ಅವರನ್ನು ಅಗಲಿದ್ದಾರೆ.
ಮೂಲ ವರದಿ: Kannada Prabha
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruJournalismCultureObituary


