BLR Today
ಶನಿವಾರ, ಅಕ್ಟೋಬರ್ 10, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ರಾಜಕೀಯBengaluru52 ನಿಮಿಷಗಳ ಹಿಂದೆ

ರಾಷ್ಟ್ರಪತಿ ಬಳಿ ಕ್ಷಮೆ ಕೇಳಬೇಕು: ಮಧು ಬಂಗಾರಪ್ಪ

ರಾಷ್ಟ್ರಪತಿ ಬಳಿ ಕ್ಷಮೆ ಕೇಳಬೇಕು: ಮಧು ಬಂಗಾರಪ್ಪ
ಚಿತ್ರ: Public TV

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಅಗೌರವದ ಮಾತಾಡಿರುವ ಸಚಿವ ಮಧು ಬಂಗಾರಪ್ಪ ಕೂಡಲೇ ರಾಷ್ಟ್ರಪತಿಗಳ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ. ಈ ಸಂಬಂಧ ಎಕ್ಸ್‌ನಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆಯನ್ನ ಜೆಡಿಎಸ್ ಖಂಡಿಸಿದೆ. ಬುಡಕಟ್ಟು ಸಮುದಾಯದಿಂದ ಬಂದು ದೇಶದ ಪ್ರಥಮ ಪ್ರಜೆಯಾಗಿರುವ ಮಹಿಳಾ ರಾಷ್ಟ್ರಪತಿಗಳಿಗೆ 'ಮೌನ ರಾಷ್ಟ್ರಪತಿ' ಎಂದು ಅಪಮಾನಿಸಿರುವುದು ಕಾಂಗ್ರೆಸ್ ಪಕ್ಷದ ಸಂವಿಧಾನ ವಿರೋಧಿ ಹಾಗೂ ಅಹಂಕಾರದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಜೆಡಿಎಸ್ ಕಿಡಿಕಾರಿದೆ.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
JDSMadhu BangarappaDroupadi MurmuBengaluru