BLR Today
ಶುಕ್ರವಾರ, ನವೆಂಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru3 ಗಂಟೆಗಳ ಹಿಂದೆ

ಐಡಬ್ಲ್ಯುಎಸ್‌ಟಿ 36ನೇ ಬ್ಯಾಚ್ ಘಟಿಕೋತ್ಸವ ಬೆಂಗಳೂರಿನಲ್ಲಿ ನಡೆಯಿತು

ಐಡಬ್ಲ್ಯುಎಸ್‌ಟಿ 36ನೇ ಬ್ಯಾಚ್ ಘಟಿಕೋತ್ಸವ ಬೆಂಗಳೂರಿನಲ್ಲಿ ನಡೆಯಿತು
ಚಿತ್ರ: Prajavani

ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯಲ್ಲಿ (ಐಡಬ್ಲ್ಯುಎಸ್‌ಟಿ) ಮರ ಮತ್ತು ಪ್ಯಾನಲ್ ಉತ್ಪನ್ನ ತಂತ್ರಜ್ಞಾನ ವಿಷಯದ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ (ಪಿಜಿಡಿಸಿ) ಕೋರ್ಸ್‌ನ 36ನೇ ಬ್ಯಾಚ್‌ನ ಘಟಿಕೋತ್ಸವ ಬುಧವಾರ ನಡೆಯಿತು. ಘಟಿಕೋತ್ಸವದಲ್ಲಿ 32 ವಿದ್ಯಾರ್ಥಿಗಳಿಗೆ ಡಿಪ್ಲಮಾ ಪ್ರಮಾಣಪತ್ರ, ಮೂವರಿಗೆ ಚಿನ್ನದ ಪದಕ ಹಾಗೂ ಒಬ್ಬರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಐಸಿಎಆರ್–ಅಟಾರಿ ನಿರ್ದೇಶಕ ಎಂ.ಪ್ರಭಾಕರ್, ವೃತ್ತಿಜೀವನದಲ್ಲಿ ಪ್ರಾಮಾಣಿಕತೆ, ಶಿಸ್ತು ಮತ್ತು ಸಮರ್ಪಣಾ ಮನೋಭಾವ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
IWSTBengaluruGraduationEducation