ಒಂದೇ ಕುಟುಂಬದ ಏಳು ಮಂದಿ ಹತ್ಯೆ: ಮೃತದೇಹದ ಚೀಲದಲ್ಲಿ ಒಣಮೆಣಸಿನಕಾಯಿ
ಒಂದೇ ಕುಟುಂಬದ ಏಳು ಜನರ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಮೃತದೇಹಗಳನ್ನು ಪ್ಯಾಕ್ ಮಾಡಿದ್ದ ಚೀಲದಲ್ಲಿ ಆರೋಪಿ ಇಂದುಶೇಖರ್, ಒಣಮೆಣಸಿಕಾಯಿ ಮತ್ತು ಖಾರದ ಪುಡಿ ಬಳಸಿರುವುದು ಪತ್ತೆಯಾಗಿದೆ. ಏಳೂ ಜನರನ್ನು ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಬಳಿಕ ಶವದ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟುವ ಜತೆಗೆ ಸೆಲೋ ಟೇಪ್ ಸುತ್ತಿ, ಗೋಣಿ ಚೀಲ ಮತ್ತು ಬೆಡ್‌ಶೀಟ್‌ನಿಂದ ಪ್ಯಾಕ್ ಮಾಡುವ ಸಂದರ್ಭದಲ್ಲಿ ದೇಹದ ಮೇಲೆಲ್ಲಾ ಖಾರದ ಪುಡಿ ಸಿಂಪಡಿಸಿ, ಒಣ ಮೆಣಸಿನಕಾಯಿಯನ್ನೂ ತುಂಬುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಸರಣಿ ಹತ್ಯೆ ಪ್ರಕರಣದಲ್ಲಿ ತಂದೆಗೆ ಸಹಕಾರ ನೀಡಿರುವ ಮಗಳನ್ನು ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಿ 10 ದಿನ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeMurder


