ಜ್ಞಾನ ವಿಕಾಸ ಇನ್ಸ್ಟಿಟ್ಯೂಟ್ನಲ್ಲಿ ಅಂತರ ಕಾಲೇಜು ಕೊಕ್ಕೊ ಪಂದ್ಯಾವಳಿ
ಜ್ಞಾನ ವಿಕಾಸ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ಕಾಮರ್ಸ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಅಂತರ ಕಾಲೇಜು ಮಟ್ಟದ ಪುರುಷರ ಕೊಕ್ಕೊ ಪಂದ್ಯಾವಳಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಸಿ.ಎಂ. ಲಿಂಗಪ್ಪ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಬಿ.ಟಿ. ನಾಗೇಂದ್ರ ಹಾಗೂ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಲಪತಿ, ಸಂಸ್ಥೆಯ ಕಾರ್ಯದರ್ಶಿ ರೇಣುಕ ಪ್ರಸಾದ್, ಖಜಾಂಚಿ ಬಿ.ಎನ್. ಗಂಗಾಧರ್, ನಿರ್ದೇಶಕ ಸತೀಶ್ ಚಂದ್ರ ಹಾಗೂ ಪ್ರಾಂಶುಪಾಲರಾದ ರೂಪಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಶರತ್ ಕುಮಾರ್ ಕೆ., ಮಧು ಮತ್ತು ದೇವರಾಜ್ ಹಾಜರಿದ್ದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationSports


