BLR Today
ಗುರುವಾರ, ಅಕ್ಟೋಬರ್ 22, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಇಂಡಿಯನ್ ರೈಲ್ವೇಸ್ ಫಿಬಾ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಲೀಗ್ ಏಷ್ಯಾ ಟೂರ್ನಿಯಿಂದ ನಿರ್ಗಮಿಸಿತು

ಇಂಡಿಯನ್ ರೈಲ್ವೇಸ್ ಫಿಬಾ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಲೀಗ್ ಏಷ್ಯಾ ಟೂರ್ನಿಯಿಂದ ನಿರ್ಗಮಿಸಿತು
ಚಿತ್ರ: Prajavani

ಗುಂಪು ಹಂತದಲ್ಲಿ ಎರಡೂ ಪಂದ್ಯಗಳನ್ನು ಸೋತ ಭಾರತೀಯ ರೈಲ್ವೇಸ್ ತಂಡವು ಫಿಬಾ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಲೀಗ್ ಏಷ್ಯಾ (ಡಬ್ಲ್ಯುಬಿಎಲ್‌ಎ-2026) ಟೂರ್ನಿಯಿಂದ ನಿರ್ಗಮಿಸಿತು. ಬುಧವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ರೈಲ್ವೇಸ್ 42–81 ಅಂಕಗಳಿಂದ ಕೊರಿಯಾದ ಕೆ.ಬಿ.ಸ್ಟಾರ್ಟ್ಸ್ ತಂಡಕ್ಕೆ ಶರಣಾಯಿತು. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ರೈಲ್ವೇಸ್ 35–119ರಿಂದ ಜಪಾನ್‌ನ ಡೆನ್ಸೊ ಐರಿಸ್‌ ಕ್ಲಬ್‌ ತಂಡದ ಎದುರು ಪರಾಭವಗೊಂಡಿತ್ತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
sportsbasketballrailways