BLR Today
ಗುರುವಾರ, ಅಕ್ಟೋಬರ್ 15, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಜಕ್ಕೂರು-ಅಮೃತಹಳ್ಳಿ ಮುಖ್ಯರಸ್ತೆಯ ಬಳಿ ಚರಂಡಿ ಕಾಮಗಾರಿ ಅಪೂರ್ಣತೆಯಿಂದ ಸಂಚಾರ ದಟ್ಟಣೆ

ಜಕ್ಕೂರು-ಅಮೃತಹಳ್ಳಿ ಮುಖ್ಯರಸ್ತೆಯ ಬಳಿ ಚರಂಡಿ ಕಾಮಗಾರಿ ಅಪೂರ್ಣತೆಯಿಂದ ಸಂಚಾರ ದಟ್ಟಣೆ
ಚಿತ್ರ: Prajavani

ಜಕ್ಕೂರು-ಅಮೃತಹಳ್ಳಿ ಮುಖ್ಯರಸ್ತೆಯ ಎಂಸಿಇಸಿಎಚ್‌ಎಸ್‌ ಬಡಾವಣೆ ಸಮೀಪ ಹಾಗೂ ಅಮೃತಹಳ್ಳಿಯ 18ನೇ ಕ್ರಾಸ್‌ ಬಳಿ ಚರಂಡಿ ನಿರ್ಮಾಣಕ್ಕಾಗಿ ಗುಂಡಿ ಅಗೆದುಬಿಟ್ಟು ಮೂರು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಕೆ.ವಿ.ಜಯರಾಂ ಜೋಡಿ ರಸ್ತೆಗೆ ಹೊಂದಿಕೊಂಡಿರುವ ಈ ರಸ್ತೆಯಲ್ಲಿ ಚರಂಡಿ ಕಾಮಗಾರಿಗಾಗಿ ರಸ್ತೆ ಮುಚ್ಚಲಾಗಿದೆ. ಜಕ್ಕೂರು, ಯಲಹಂಕ, ಸಂಪಿಗೇಹಳ್ಳಿ ಅಗ್ರಹಾರ, ಚೊಕ್ಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚರಿಸುವ ಸಾವಿರಾರು ವಾಹನ ಸವಾರರು ಪರದಾಡುವಂತಾಗಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruYelahankaJakkurAmrutahalli