BLR Today
ಬುಧವಾರ, ನವೆಂಬರ್ 4, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru9 ಗಂಟೆಗಳ ಹಿಂದೆ

ಚಿಕ್ಕಜಾಲ ಕೋಟೆ ಪುನಶ್ಚೇತನ ಯೋಜನೆಗೆ ಚಾಲನೆ

ಚಿಕ್ಕಜಾಲ ಕೋಟೆ ಪುನಶ್ಚೇತನ ಯೋಜನೆಗೆ ಚಾಲನೆ
ಚಿತ್ರ: Prajavani

ಯಲಹಂಕದಲ್ಲಿರುವ ಚಿಕ್ಕಜಾಲದ ಐತಿಹಾಸಿಕ ಕೋಟೆ, ಕಲ್ಯಾಣಿ ಮತ್ತು ಪಾರಂಪರಿಕ ಸ್ಮಾರಕಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಗೆ ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ ಚಾಲನೆ ನೀಡಿದರು. ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆ ನೀಡುವ ಜೊತೆಗೆ, ನಗರದ ಐತಿಹಾಸಿಕ ಪರಂಪರೆ ಮತ್ತು ಸಾಂಸ್ಕೃತಿಕ ಸ್ಮಾರಕಗಳನ್ನು ಸಂರಕ್ಷಿಸುವುದು ಕೂಡ ನಮ್ಮ ಜವಾಬ್ದಾರಿ ಎಂದು ಅವರು ಹೇಳಿದರು. ಕಶಿ ರಾ ಸಂಸ್ಥೆಯ ಬಸಂತ್ ಪೊದಾರ್ ಅವರು ಆರ್ಥಿಕ ನೆರವು ನೀಡಲು ಮತ್ತು ಇಂಟಕ್ ಸಂಸ್ಥೆಯ ಬೆಂಗಳೂರು ಘಟಕದ ಸಂಚಾಲಕಿ ಮೀರಾ ಅಯ್ಯರ್ ಪುನಶ್ಚೇತನಗೊಳಿಸಲು ಮುಂದಾಗಿರುವುದು ಶ್ಲಾಘನೀಯ ಎಂದೂ ಅವರು ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಕೆ. ಅಶೋಕನ್, ದಾನೇಗೌಡ, ಎನ್.ಕೆ.ಮಹೇಶ್‌‌ಕುಮಾರ್, ಉದಯಶಂಕರ್, ರವಿಕುಮಾರ್, ಬಿ.ಎಂ.ನಾಗೇಶ್, ಎ.ಕೆಂಪೇಗೌಡ, ಡಿ.ಜಗನ್ನಾಥ್, ಬಿ.ಕೆ.ನಾರಾಯಣಸ್ವಾಮಿ, ಜಯಕುಮಾರ್, ಚೇತನ್‌ಕುಮಾರ್, ಪಂಚಮಿ ಶ್ರೀನಿವಾಸ್, ಬಿ.ಆರ್.ಪ್ರವೀಣ್, ಬಿ.ಕೆ.ರವೀಂದ್ರನಾಥಗೌಡ, ಅಮೀರ್ ಜಾನ್ ಮತ್ತು ಜಾಲ ಕಿಟ್ಟಿ ಉಪಸ್ಥಿತರಿದ್ದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruYelahankaHistoryCultureDevelopment