ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನಡೆದ 'ಲ್ಯಾಮ್ ರಿಸರ್ಚ್ ಚಾಲೆಂಜ್– 2026' ಸ್ಪರ್ಧೆಯಲ್ಲಿ ಐಐಟಿ ಗುವಾಹಟಿ ತಂಡಕ್ಕೆ ಪ್ರಶಸ್ತಿ
ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನಡೆದ 'ಲ್ಯಾಮ್ ರಿಸರ್ಚ್ ಚಾಲೆಂಜ್– 2026' ಸ್ಪರ್ಧೆಯಲ್ಲಿ ಗುವಾಹಟಿಯ ಐಐಟಿ ತಂಡ ಸಮಗ್ರ ಪ್ರಶಸ್ತಿ ಜಯಿಸಿತು. ಅಮೆರಿಕದ 'ಲ್ಯಾಮ್ ರೀಸರ್ಚ್' ಸೆಮಿ ಕಂಡಕ್ಟರ್ ಕಂಪನಿಯು ದೇಶದ ಯುವ ತಂತ್ರಜ್ಞರನ್ನು ಗುರುತಿಸಲು ಆಯೋಜಿಸಿದ್ದ 3ನೇ ಆವೃತ್ತಿಯ ಸ್ಪರ್ಧೆಯಲ್ಲಿ 23 ರಾಜ್ಯಗಳು ಹಾಗೂ ನಾಲ್ಕು ಕೇಂದ್ರಾಡಳಿತ ಪ್ರದೇಶಗಳ 189 ಕಾಲೇಜುಗಳಿಂದ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಂಜಾಬ್ನ ಐಐಟಿ (ರೋಪಾರ್) ಮತ್ತು ಕೇರಳದ ಐಐಟಿ (ಕ್ಯಾಲಿಕಟ್) ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು. ತಾಂತ್ರಿಕ ಸವಾಲುಗಳಿಗೆ ನಾವಿನ್ಯಪೂರ್ಣ ಪರಿಹಾರ ರೂಪಿಸುವ ಸೃಜನಶೀಲತೆಯನ್ನು ಮೌಲ್ಯಮಾಪನ ಮಾಡಿದ ನಂತರ ಲ್ಯಾಮ್ ರಿಸರ್ಚ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಂಗೇಶ್ ರಾಘವನ್ ಅವರು ವಿಜೇತರನ್ನು ಘೋಷಿಸಿ ₹10 ಲಕ್ಷ ನಗದು ಬಹುಮಾನ ವಿತರಿಸಿದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationTechnologyCompetition

