ನೀಲಿಬೆಳಕಿನಲ್ಲಿ ಜೀವಕೋಶಗಳ ವಿಭಜನೆ
ಬೆಂಗಳೂರಿನ ಐಐಎಸ್‍ಸಿಯ ಸೂಕ್ಷ್ಮಜೀವಶಾಸ್ತ್ರ ಮತ್ತು ಜೀವಕೋಶ ಜೀವಶಾಸ್ತ್ರ ವಿಭಾಗದ ವಿಜ್ಞಾನಿಗಳಾದ ವಿಘ್ನೇಶ್ ಒಳಕ್ಕಲ್, ಮಧುಮಿತಾ ಬಾಲಕೃಷ್ಣನ್ ಮತ್ತು ಸಚಿನ್ ಕೋಟಕ್ ಅವರನ್ನೊಳಗೊಂಡ ಸಂಶೋಧಕರ ತಂಡವು ಕೇವಲ ನೀಲಿಬೆಳಕಿನ ಕಿರಣವನ್ನು ಹಾಯಿಸುವ ಮೂಲಕ ಮಾನವ ಜೀವಕೋಶದ ವಿಭಜನೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿಂಥೆಟಿಕ್ ಬಯಾಲಜಿ ಕ್ಷೇತ್ರದಲ್ಲಿ ಇದು ಅತಿ ದೊಡ್ಡ ಸಾಧನೆ ಎಂದು ಬಣ್ಣಿಸಲಾಗಿದ್ದು, ಜೀವಕೋಶಗಳು ವಿಭಜನೆಯಾಗುವ ಸೂಕ್ಷ್ಮ ಯಂತ್ರಾಂಗವನ್ನು ರಿಮೋಟ್ ಕಂಟ್ರೋಲ್ ಮಾದರಿಯಲ್ಲಿ ಕಾರ್ಯಾಚರಿಸುವ ಹೊಸ ತಂತ್ರಜ್ಞಾನವನ್ನು ಇವರು ಅಭಿವೃದ್ಧಿಪಡಿಸಿದ್ದಾರೆ. ವಿಜ್ಞಾನಿಗಳು ಈ ಹೊಸ ತಂತ್ರಕ್ಕೆ ‘ಲಿಸಾ’ (LISA - Light-Induced Spindle Assembly) ಎಂದು ಹೆಸರಿಟ್ಟಿದ್ದಾರೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.


