BLR Today
ಗುರುವಾರ, ಅಕ್ಟೋಬರ್ 1, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಕೆಪಿಎಸ್‌ಸಿ ಹಗರಣ ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ನೀಡಿದ್ದಾಗಿ ಐಎಎಸ್ ಅಧಿಕಾರಿ ಒಪ್ಪಿಕೊಂಡರು

ಕೆಪಿಎಸ್‌ಸಿ ಹಗರಣ ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ನೀಡಿದ್ದಾಗಿ ಐಎಎಸ್ ಅಧಿಕಾರಿ ಒಪ್ಪಿಕೊಂಡರು
ಚಿತ್ರ: Public TV

ಕೆಪಿಎಸ್‌ಸಿ ಹಗರಣ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರು ಇಡಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಕನ್ನಾಳೆ ಜೊತೆಗಿನ ಸ್ನೇಹದ ಮಾಹಿತಿ ಹೊರಹಾಕಿದ್ದು, ಕೇವಲ ಇಬ್ಬರು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೊಡೋದಾಗಿ ಕನ್ನಾಳೆ ಗ್ಯಾನೇಂದ್ರ ನಂಬಿಸಿದ್ದ ಎಂದು ತಿಳಿಸಿದ್ದಾರೆ. ಕಚೇರಿಯಲ್ಲಿದ್ದ ಶಿಯೋಮಿ ಟ್ಯಾಬ್ಲೆಟ್‌ನಲ್ಲಿ ಅಂತಿಮ ಹಂತದ ಪ್ರಶ್ನೆಪತ್ರಿಕೆಯನ್ನು ನಕಲು ಮಾಡಿದ್ದಾಗಿ ಅಧಿಕಾರಿ ಗ್ಯಾನೇಂದ್ರ ಇಡಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಇದಲ್ಲದೆ, 2025 ರ ಅವಧಿಯಲ್ಲಿ ಗ್ಯಾನೇಂದ್ರ ತನ್ನ ಅತ್ತಿಗೆಗೆ 15.39 ಲಕ್ಷ ಹಣ ನೀಡಿದ್ದಾರೆ ಮತ್ತು ಸಹೋದರ ಬ್ಯಾಂಕ್ ಅಕೌಂಟ್‌ಗೆ 10.94 ಲಕ್ಷ ಹಣ ಸಂದಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KPSC ScamIAS OfficerGyanendra KumarEDBengaluru