BLR Today
ಶನಿವಾರ, ಸೆಪ್ಟೆಂಬರ್ 26, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

₹35.8 ಲಕ್ಷ ಬಿಲ್ ಬಾಕಿ ಎಂದು ಮೃತದೇಹ ನೀಡಲು ನಿರಾಕರಿಸಿದೆ ಆಸ್ಪತ್ರೆ; ಬಾಂಗ್ಲಾದೇಶಿ ರೋಗಿಯ ಕುಟುಂಬದ ಆರೋಪ

₹35.8 ಲಕ್ಷ ಬಿಲ್ ಬಾಕಿ ಎಂದು ಮೃತದೇಹ ನೀಡಲು ನಿರಾಕರಿಸಿದೆ ಆಸ್ಪತ್ರೆ; ಬಾಂಗ್ಲಾದೇಶಿ ರೋಗಿಯ ಕುಟುಂಬದ ಆರೋಪ
ಚಿತ್ರ: Kannada Prabha

ಬೆಂಗಳೂರಿನ ಹಳೆ ಏರ್ ಪೋರ್ಟ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಬಾಂಗ್ಲಾದೇಶಿ ರೋಗಿಯೊಬ್ಬರ ಪತ್ನಿ ಗಂಭೀರ ಆರೋಪ ಮಾಡಿದ್ದು, ಸುಮಾರು 35.8 ಲಕ್ಷ ರೂಪಾಯಿ ಬಾಕಿ ಬಿಲ್ ಪಾವತಿಸದ ಕಾರಣ ತಮ್ಮ ಪತಿಯ ಮೃತದೇಹವನ್ನು ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆ ಆಡಳಿತ ತಡೆಹಿಡಿದಿದೆ ಎಂದು ಆರೋಪಿಸಿದ್ದಾರೆ. ಆದರೆ ಆಸ್ಪತ್ರೆ ಈ ಆರೋಪವನ್ನು ನಿರಾಕರಿಸಿದ್ದು, ಬಾಕಿ ಹಣವನ್ನು ಹೊಂದಿಸುವವರೆಗೆ ಮೃತದೇಹವನ್ನು ಶವಾಗಾರದಲ್ಲಿ ಇರಿಸುವಂತೆ ಕುಟುಂಬದವರೇ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಸೆಪ್ಟೆಂಬರ್ 8ರಂದು ತೀವ್ರ ಹೃದಯ ಸಂಬಂಧಿ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾದ ಶಬುಜ್ ಅವರು ಸೆಪ್ಟೆಂಬರ್ 18ರಂದು ಮೃತಪಟ್ಟಿದ್ದರು.

ಮೂಲ ವರದಿ: Kannada Prabha ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHospitalBilling DisputeDeceased BodyOld Airport Road