BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಉನ್ನತ ಶಿಕ್ಷಣ ಸಂಸ್ಥೆಗಳು ಉದ್ಯಮಗಳೊಂದಿಗೆ ಸಹಭಾಗಿತ್ವ ಹೊಂದಬೇಕು ಎಂದು ಫೆನಿಲ್ ವಡಕ್ಕೆನ್

ಬೆಂಗಳೂರಿನಲ್ಲಿ ನಡೆದ 'ಇಂಡಿಯಾ ಅನಲಿಟಿಕ್ಸ್ ಮತ್ತು ಎಐ ಸಮಾವೇಶ'ದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಇನ್‌ಸ್ಟಿಟ್ಯೂಟ್ ಆಫ್ ಅನಲಿಟಿಕ್ಸ್‌ನ ಅಧಿಕಾರಿ ಫೆನಿಲ್ ವಡಕ್ಕೆನ್ ಮಾತನಾಡಿ, ಡೇಟಾ ಅನಲಿಟಿಕ್ಸ್ ಮತ್ತು ಎಐ ಚಾಲಿತ ಆರ್ಥಿಕತೆ ಮುಂಚೂಣಿಗೆ ಬರುವ ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳ ನಡುವೆ ಸಹಭಾಗಿತ್ವ ಹೆಚ್ಚಬೇಕಿದೆ ಎಂದರು. ಮಾನವ ಸಂಪನ್ಮೂಲ ಬೇಡಿಕೆಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣ ಕ್ಷೇತ್ರವು ಪ್ರತಿಸ್ಪಂದಿಸಬೇಕಿದೆ ಎಂದು ಅವರು ಹೇಳಿದರು. ಐಒಎ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಲಾರ್ ವಾಲ್ಷ್ ಅವರು ಅನಲಿಟಿಕ್ಸ್ ಮತ್ತು ಎ.ಐ ಕಲಿಕೆ ಹಾಗೂ ಉದ್ಯೋಗ ಸ್ವರೂಪ ವನ್ನು ಬದಲಿಸುತ್ತಿವೆ. ಹೀಗಾಗಿ, ಶಿಕ್ಷಣ ಸಂಸ್ಥೆಗಳು ಹೊಸ ಕಾಲದ ತಂತ್ರಜ್ಞಾನ ಕಲಿಕೆಗೆ ಆದ್ಯತೆ ನೀಡಬೇಕು ಎಂದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.