BLR Today
ಮಂಗಳವಾರ, ಅಕ್ಟೋಬರ್ 13, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru4 ಗಂಟೆಗಳ ಹಿಂದೆ

ಪುತ್ರಿ ನಾಮಕರಣ: ಕನ್ನಾಳೆಗೆ ಅನುಮತಿ

ಪುತ್ರಿ ನಾಮಕರಣ: ಕನ್ನಾಳೆಗೆ ಅನುಮತಿ
ಚಿತ್ರ: Prajavani

ಕೆಪಿಎಸ್‌ಸಿ ನೇಮಕಾತಿ ಹಗರಣದ ಮಧ್ಯವರ್ತಿ ಬಸವರಾಜ್‌ ಕನ್ನಾಳೆ ತಮ್ಮ ಪುತ್ರಿಯ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೈಕೋರ್ಟ್ ಅನುಮತಿ ನೀಡಿದೆ. ಜಾಮೀನು ಕೋರಿ ಬಸವರಾಜ್‌ ಕನ್ನಾಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಈ ಕುರಿತಂತೆ ಆದೇಶಿಸಿದೆ. ಕನ್ನಾಳೆ ಪೊಲೀಸರ ಎಸ್ಕಾರ್ಟ್‌ನಲ್ಲಿ ಇದೇ 15ರಂದು ಜೈಲಿನಿಂದ ತೆರಳಿ ಇದೇ 20ಕ್ಕೆ ವಾಪಸ್‌ ಆಗಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಈ ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHigh CourtBasavaraj KannaleKPSC