BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ದಿನಗಳ ಹಿಂದೆ

ಅಕ್ರಮ ಬಾಂಗ್ಲಾದೇಶಿ ನಿವಾಸಿಗಳ ಆರೋಪದ ಇಬ್ಬರ ಪೌರತ್ವದ ಕುರಿತು ನ್ಯಾಯಸಮ್ಮತ ವಿಚಾರಣೆ ನಡೆಸಲು ಹೈಕೋರ್ಟ್ ಆದೇಶ

ಅಕ್ರಮ ಬಾಂಗ್ಲಾದೇಶಿ ನಿವಾಸಿಗಳ ಆರೋಪದ ಇಬ್ಬರ ಪೌರತ್ವದ ಕುರಿತು ನ್ಯಾಯಸಮ್ಮತ ವಿಚಾರಣೆ ನಡೆಸಲು ಹೈಕೋರ್ಟ್ ಆದೇಶ
ಚಿತ್ರ: Prajavani

ಅಕ್ರಮ ಬಾಂಗ್ಲಾದೇಶಿ ವಲಸಿಗರೆಂಬ ಆರೋಪ ಎದುರಿಸುತ್ತಿರುವ ಅಬ್ದುಲ್ ರಹೀಂ (47) ಮತ್ತು ಇವರ ಸಂಬಂಧಿ ಜಹೀದುಲ್ ಇಸ್ಲಾಂ (38) ಅವರ ಪೌರತ್ವದ ಕುರಿತು ಕಾನೂನುಬದ್ಧ ಮತ್ತು ನ್ಯಾಯಸಮ್ಮತ ವಿಚಾರಣೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವತನಕ ಅವರನ್ನು ದೇಶದಿಂದ ಗಡಿಪಾರು ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಕೊತ್ತನೂರಿನ 'ಯುಟೈಲ್ ಫೌಂಡೇಶನ್' ಪುನರ್ವಸತಿ ಕೇಂದ್ರದಲ್ಲಿರುವ ಇಬ್ಬರ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತು ಆದೇಶಿಸಿದೆ. 'ವ್ಯಕ್ತಿಯೊಬ್ಬ ವಿದೇಶಿಯನೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ವಿದೇಶಿಯರ ನ್ಯಾಯಮಂಡಳಿಗೆ ಇದೆಯೇ ಹೊರತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್‌ಆರ್‌ಒ) ಅಧಿಕಾರಿ ಗಳಿಗೆ ಅಲ್ಲ. ಪೌರತ್ವದ ಕುರಿತಾದ ದಾಖಲೆ ಪ್ರಸ್ತುತಪಡಿಸಲು ಸಂಬಂಧಿಸಿದ ಪ್ರಾಧಿಕಾರಗಳು ಅರ್ಜಿದಾರರಿಗೆ ಕಾನೂನು ಪ್ರಕಾರ ಅವಕಾಶ ನೀಡಬೇಕು' ಎಂದು ನಿರ್ದೇಶಿಸಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
High CourtDeportationCitizenshipBengaluru