BLR Today
ಮಂಗಳವಾರ, ಸೆಪ್ಟೆಂಬರ್ 29, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನ ರಸ್ತೆಯಲ್ಲಿ ಮರದ ಕೊಂಬೆ ಬಿದ್ದು ಗಾಯಗೊಂಡ ವ್ಯಕ್ತಿಗೆ ₹2.77 ಕೋಟಿ ಪರಿಹಾರ, GBAಗೆ ಹೈಕೋರ್ಟ್ ಆದೇಶ

ಬೆಂಗಳೂರಿನ ರಸ್ತೆಯಲ್ಲಿ ಮರದ ಕೊಂಬೆ ಬಿದ್ದು ಗಾಯಗೊಂಡ ವ್ಯಕ್ತಿಗೆ ₹2.77 ಕೋಟಿ ಪರಿಹಾರ, GBAಗೆ ಹೈಕೋರ್ಟ್ ಆದೇಶ
ಚಿತ್ರ: Asianet Suvarna News

ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸುತ್ತಿರುವ ವೇಳೆ ಮರದ ಕೊಂಬೆ ಬಿದ್ದು ಗಾಯಗೊಂಡ ಜಿ.ಚಂದನ್ ಎಂಬುವವರಿಗೆ ಬರೋಬ್ಬರಿ 2.77 ಕೋಟಿ ರು. ಪರಿಹಾರ ಒದಗಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ನಿರ್ದೇಶಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಟ್ರಾಮ್ಯಾಟಿಕ್ ಪ್ಯಾರಾಪ್ಲೀಜಿಯಾ ಸಮಸ್ಯೆಗೆ ಒಳಗಾಗಿರುವ ಜಿ.ಚಂದನ್ ಅವರು ವೈದ್ಯಕೀಯ ಹಾಗೂ ಕೌಟುಂಬಿಕ ಖರ್ಚು ಹಾಗೂ ಪುತ್ರಿಯರ ಶಿಕ್ಷಣ ವೆಚ್ಚಕ್ಕಾಗಿ 5 ಕೋಟಿ ರು. ಪರಿಹಾರ ಒದಗಿಸಲು ಸರ್ಕಾರ ಮತ್ತು ಜಿಬಿಎಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಅರ್ಜಿದಾರರಿಗೆ 2,77,29,695 ರು. ಪರಿಹಾರ ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಜಿಬಿಎಗೆ ನಿರ್ದೇಶಿಸಿದೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ. ಇದೇ ಸುದ್ದಿ ವರದಿ ಮಾಡಿದ ಇತರ ಮಾಧ್ಯಮಗಳು: TV9 Kannada
BengaluruHigh CourtGBACompensationInjury