ಕೋರ್ಟ್ ದಾಖಲೆ ಕೋರಿಕೆ ಸ್ವಯಂ ಚಾಲಿತ ಹಕ್ಕಲ್ಲ: ಹೈಕೋರ್ಟ್
ಕೋರ್ಟ್ ಕಲಾಪಗಳ ಸಂಗ್ರಹದ (ಆರ್ಕೈವ್) ಆಡಿಯೊ-ವಿಡಿಯೊ ದಾಖಲೆಯ ಪ್ರತಿಗಳನ್ನು ಪಡೆಯಲು ಅರ್ಜಿದಾರರಿಗೆ ಸ್ವಯಂಚಾಲಿತ ಹಕ್ಕಿಲ್ಲ ಎಂದು ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ. 'ಕರ್ನಾಟಕ ಕೋರ್ಟ್ ಕಲಾಪಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು-2021ರ ನಿಯಮ 8 ಮತ್ತು 10ರ ಪ್ರಕಾರ ಪೀಠವು ನಿರ್ದಿಷ್ಟವಾಗಿ ಆದೇಶಿಸದ ಹೊರತು ದಾಖಲೆಗಳ ಪ್ರತಿಗಳನ್ನು ಪಡೆಯುವ ಹಕ್ಕು ಅರ್ಜಿದಾರರಿಗೆ ಲಭ್ಯವಿಲ್ಲ' ಎಂದು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಸ್ಪಷ್ಟಪಡಿಸಿದೆ. ಮೇಲ್ಮನವಿ ವಿಚಾರಣೆಯ ಸಂಗ್ರಹಿತ ದಾಖಲೆಯ ಪ್ರತಿಗಳನ್ನು ನೀಡಲು ನಿರಾಕರಿಸಿದ್ದ ಹೈಕೋರ್ಟ್ ಆಡಳಿತ ವಿಭಾಗದ ನಿರ್ಧಾರ ಪ್ರಶ್ನಿಸಿ ಎ. ಸತ್ಯನಾರಾಯಣ ಸ್ವಾಮಿ (72) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
High CourtLegalBengaluru
