BLR Today
ಬುಧವಾರ, ಅಕ್ಟೋಬರ್ 28, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru3 ಗಂಟೆಗಳ ಹಿಂದೆ

ಆರೋಗ್ಯ ವಲಯದ ಸಲಹಾ ಸಮಿತಿ ರಚನೆ

ಆರೋಗ್ಯ ವಲಯದ ಸಲಹಾ ಸಮಿತಿ ರಚನೆ
ಚಿತ್ರ: Prajavani

ಆರೋಗ್ಯ ವಲಯದ ದಕ್ಷತೆ ಹೆಚ್ಚಿಸಲು ತಜ್ಞ ವೈದ್ಯರನ್ನು ಒಳಗೊಂಡ ಮುನ್ನೋಟ ಸಲಹಾ ಸಮಿತಿಯನ್ನು ಶೀಘ್ರವೇ ರಚಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಮಹಾಬೋಧಿ ಬ್ರೈನ್ಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಟ್ರಾಮಾ ಹಾಗೂ ಪಾರ್ಶ್ವವಾಯು ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.' ನರಶಸ್ತ್ರಚಿಕಿತ್ಸಕ ಡಾ. ಎನ್.ಕೆ.ವೆಂಕಟರಮಣ ಅವರು ತೈವಾನ್‌ ನಿಂದ ತರಿಸಲಾಗಿರುವ ಆಧುನಿಕ ರೊಬೊಟಿಕ್ ಯಂತ್ರವನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು. ಡಾ. ವೆಂಕಟರಮಣ ರಚಿಸಿರುವ ‘ಮಿದುಳಿನ ಆಘಾತ’, ‘ನ್ಯುರೋ ಸರ್ಜಿಕಲ್ ರೊಬೊಟ್‌’ ಪುಸ್ತಕಗಳನ್ನು ಜನಾರ್ಪಣೆ ಮಾಡಲಾಯಿತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
HealthBengaluruMedicalScience