ಎಚ್ಡಿಕೆ ನಿವಾಸದಲ್ಲೇ ಸ್ಟಿಂಗ್ ಆಪರೇಷನ್ ಮೊಬೈಲ್ ಎಕ್ಸ್ಚೇಂಜ್ ಪೊಲೀಸ್ ಆಯುಕ್ತರ ವಿರುದ್ದ HDK ಕೆಂಡ
ಸ್ಟ್ರಿಂಗ್ ಆಪರೇಷನ್ ತನಿಖೆ ನಡುವೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲೇ ಆರೋಪಿ ರಿತೇಶ್ ಕುಮಾರ್ ಉಳಿದುಕೊಂಡಿದ್ದ ಮಾಹಿತಿಯಿದ್ದು, ಅವರ ದೆಹಲಿ ನಿವಾಸದಲ್ಲೇ ಸ್ಟಿಂಗ್ ಆಪರೇಷನ್ನಲ್ಲಿ ಬಳಸಿದ ಮೊಬೈಲ್ ಫೋನ್ ಎಕ್ಸ್ಚೇಂಜ್ ಆಗಿದೆ ಎಂದು ಹೇಳಿಕೆ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ವಿರುದ್ಧ ಎಚ್ಡಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೀ ಅದು ಪೊಲೀಸ್ ಕಮಿಷನರ್? ಅವರು ಹೆಡ್ ಕ್ಲರ್ಕ್ಗಿಂತ ಕಡೆಯಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಯಾರ ಹಂಗಿನಲ್ಲಿ ಕೆಲಸ ಮಾಡ್ತಿದ್ದಾರೆ? ಇವರು ತಮ್ಮ ಕೆಲಸ ಉಳಿಸಿಕೊಳ್ಳಲು ಏನೆಲ್ಲಾ ಮಾಡ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಅಲ್ಲದೆ, ಇದು ಟ್ರೇಲರ್ ಅಷ್ಟೇ ಎಂದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೂ ತಿರುಗೇಟು ನೀಡಿದ್ದಾರೆ.
ಮೂಲ ವರದಿ: Vijaya Karnataka
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
ಇದೇ ಸುದ್ದಿ ವರದಿ ಮಾಡಿದ ಇತರ ಮಾಧ್ಯಮಗಳು: The New Indian Express
HDKBengaluru PoliceSting Operation
