ಚಿತ್ರಕಲಾ ಪರಿಷತ್‌ನಲ್ಲಿ 20ರಿಂದ ಕೈಮಗ್ಗ ಮತ್ತು ಕರಕುಶಲ ಪ್ರದರ್ಶನ
ಭೀಮನಕೋಣೆಯ ಚರಕಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದಿಂದ ನೈಸರ್ಗಿಕ ಹತ್ತಿ ಯಿಂದ ತಯಾರಿಸಿದ ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಇದೇ 20ರಿಂದ 22ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಚಿತ್ರಕಲಾ ಪರಿಷತ್‌ನ 7ನೇ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ. ನ.20ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಅವರು ಉದ್ಘಾಟಿಸಲಿ ದ್ದಾರೆ. ಚರಕದ ನಿರ್ದೇಶಕಿ ಮಧುರಾ ಎಸ್.ವಿ. ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರದರ್ಶನದಲ್ಲಿ ಕರಕುಶಲ ಹಾಗೂ ನೈಸರ್ಗಿಕ ಸಹಜ ಪದಾರ್ಥಗಳನ್ನು ಉತ್ಪಾದಿಸುವ ನೇಚರ್ ಅಲೆ, ವಾವಾ ಇಂಡಿಯಾ, ಟೆರ್ರಬಾನ್, ಟಿಂಬಕ್ಟು ಕಲೆಕ್ಟಿವ್, ಸಹನಾ ರೀಡ್, ಜಿಯೋಸ್ಮಿನ್ ಹಾಗೂ ಮರಳಿ ಮಣ್ಣಿಗೆ ಸಂಸ್ಥೆಗಳು ಭಾಗವಹಿಸಲಿವೆ. ಮೂರು ದಿನಗಳಕಾಲ ಪ್ರದರ್ಶನ ನಡೆಯಲಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHandicraftExhibition


