BLR Today
ಮಂಗಳವಾರ, ಸೆಪ್ಟೆಂಬರ್ 22, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ನಕಲಿ ಔಷಧಗಳ ಜಾಲ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ

ನಕಲಿ ಔಷಧಗಳ ಜಾಲ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ
ಚಿತ್ರ: Public TV

ನಕಲಿ ಔಷಧಗಳ ಜಾಲ ನಿಯಂತ್ರಣಕ್ಕೆ ಕೇಂದ್ರ ಔಷಧ ನಿಯಂತ್ರಣ ಇಲಾಖೆ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ. ಪೈನ್‌ಕಿಲ್ಲರ್, ಆಂಟಿಬಯೋಟಿಕ್, ಇತರೆ ಔಷಧಿ ಸರಬರಾಜು ಮಾಡುವಾಗ ಹಾಗೂ ಖರೀದಿ ಮಾಡುವಾಗ ವೈದ್ಯರು, ಫಾರ್ಮಾಸಿಸ್ಟ್, ರಿಟೇಲರ್, ಡಿಸ್ಟ್ರಿಬ್ಯೂಟರ್, ಆಸ್ಪತ್ರೆ, ಹೆಲ್ತ್ಕೇರ್‌ಗಳು ಅನುಸರಿಸಬೇಕಾದ ಅಂಶಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಫಾರ್ಮಾಸಿಸ್ಟ್‌ಗಳು ಮತ್ತು ರಿಟೇಲರ್‌ಗಳು ಔಷಧಿ ಮಾರಾಟದ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಡಾಕ್ಟರ್ ಚೀಟಿ ಇಲ್ಲದೆ ಔಷಧಿಗಳನ್ನು ಮಾರುವಂತಿಲ್ಲ. ಆಸ್ಪತ್ರೆ ಮತ್ತು ಹೆಲ್ತ್ಕೇರ್ ಸಂಸ್ಥೆಗಳು ನೋವು ನಿವಾರಕ ಮತ್ತು ಆಂಟಿಬಯೋಟಿಕ್‌ಗಳನ್ನು ವಿವೇಚನೆಯಿಂದ ಬಳಸುವ ಮತ್ತು ಮಾನಿಟರ್ ಮಾಡುವ ವ್ಯವಸ್ಥೆ ಮಾಡಬೇಕು.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
healthmedicinesguidelinespharmacy