BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ದಿನಗಳ ಹಿಂದೆ

ಬೆಂಗಳೂರಿನ ಆರ್‌ಟಿಐ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಬಿಎ ಆಯುಕ್ತರ ವಿರುದ್ಧ ರುದ್ರಣ್ಣ ಹರ್ತಿಕೋಟೆ ಅಸಮಾಧಾನ

ಬೆಂಗಳೂರಿನ ಆರ್‌ಟಿಐ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಬಿಎ ಆಯುಕ್ತರ ವಿರುದ್ಧ ರುದ್ರಣ್ಣ ಹರ್ತಿಕೋಟೆ ಅಸಮಾಧಾನ
ಚಿತ್ರ: Prajavani

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ವಿಫಲವಾಗಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ವಿರುದ್ಧ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಕೀಲ ನೀರಜ್‌ ಶಾಂತಕುಮಾರ್‌ ಅವರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬೇಗೂರು ಉಪ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ 2024ರ ಮಾರ್ಚ್‌ 19ರಂದು ಆರ್‌ಟಿಐ ಅರ್ಜಿ ಸಲ್ಲಿಸಿ, ಸಿಂಗಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಉರುಳಿಸುವುದು ಹಾಗೂ ನವೀಕರಣಕ್ಕೆ ಸಂಬಂಧಪಟ್ಟ ದಾಖ ಕೋರಿದ್ದರು. ಏಪ್ರಿಲ್ 21ರಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗೂ ಅರ್ಜಿ ಸಲ್ಲಿಸಿ, ವಿಚಾರಣೆ ನಡೆದರೂ ಮಾಹಿತಿ ಕೊಟ್ಟಿರಲಿಲ್ಲ. ಮಾಹಿತಿ ಆಯೋಗದಲ್ಲಿ ಅವರು 2024ರ ಜೂನ್‌ 27ರಂದು ದ್ವಿತೀಯ ಮೇಲ್ಮನವಿ ಸಲ್ಲಿಸಿದ್ದರು. ರುದ್ರಣ್ಣ ಹರ್ತಿಕೋಟಿ ಅವರು 2025ರ ಜನವರಿ 30ರಂದು ವಿಚಾರಣೆ ಕೈಗೆತ್ತಿಕೊಂಡರು. ಹಲವು ಬಾರಿ ಸೂಚನೆ ನೀಡಿದರೂ ಮಾಹಿತಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲಿಲ್ಲ. ಹೀಗಾಗಿ, ಮಾಹಿತಿ ಹಕ್ಕು ಕಾಯ್ದೆ ಪ್ರಕಾರ, ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್‌. ರಮೇಶ್‌ ಅವರನ್ನು ಈ ಪ್ರಕರಣಕ್ಕೆ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಮಾಡಿ ಆಯುಕ್ತರು ಘೋಷಣೆ ಮಾಡಿದ್ದಾರೆ. ಡಿ.29ರಂದು ಹಾಜರಾಗುವಂತೆ ನಿರ್ದೇಶನ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBBMPRTIAdministration