ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಗಾಂಧಿ-ಶಾಸ್ತ್ರಿ ಜಯಂತಿ ಆಚರಣೆ
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ನ್ಯೂಸ್ ಪೇಪರ್ ಡಿಸ್ಟ್ರಿಬ್ಯೂಟರ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ಮಾತನಾಡಿ, ‘ಸತ್ಯ ಮತ್ತು ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯದ ದಾರಿ ತೋರಿದ ಮಹಾತ್ಮ ಗಾಂಧೀಜಿ ಹಾಗೂ ‘ಜೈ ಜವಾನ್ ಜೈ ಕಿಸಾನ್’ ಮಂತ್ರದೊಂದಿಗೆ ದೇಶವನ್ನು ಸ್ವಾವಲಂಬಿಯಾಗಿಸಿದ ಶಾಸ್ತ್ರೀಜಿ ಅವರ ತ್ಯಾಗ ಮತ್ತು ಸರಳತೆ ಎಲ್ಲರಿಗೂ ಮಾದರಿ’ ಎಂದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಮಾತನಾಡಿ, ‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಹಾಗೂ ದೇಶದ ಆರ್ಥಿಕತೆಯನ್ನು ಮುನ್ನಡೆಸು ವಲ್ಲಿ ಪ್ರಮುಖ ಪಾತ್ರ ವಹಿಸಿದ ಎರಡನೇ ಪ್ರಧಾನಿ ಶಾಸ್ತ್ರೀಜಿ ಅವರ ಕೊಡುಗೆ ಅಪಾರ’ ಎಂದರು. ಟ್ರಸ್ಟ್ ನಿರ್ದೇಶಕ ಗೋಪಾಲ್ ಮಾತನಾಡಿದರು. ಒಕ್ಕೂಟದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ., ಕಾರ್ಯದರ್ಶಿ ಜಗದೀಶ್, ಬಸವೇಶ್ವರನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಕೆ. ಶಂಭುಲಿಂಗ ಅವರ ಪತ್ನಿ ಪಲ್ಲವಿ ಪಾಲ್ಗೊಂಡಿದ್ದರು.


