ಹಲಗೂರಿನ ಹುಚ್ಚೇಗೌಡನದೊಡ್ಡಿ ದರ್ಗಾದಲ್ಲಿ ಗಂಧದ ಹಬ್ಬ ಆಚರಣೆ
ಹಲಗೂರು: ಶುಕ್ರವಾರ ರಾತ್ರಿ ಹಲಗೂರಿನ ಹುಚ್ಚೇಗೌಡನದೊಡ್ಡಿ ದರ್ಗಾದಲ್ಲಿ ಗಂಧದ ಹಬ್ಬ ಹಿಂದೂ-ಮುಸ್ಲಿಂ ಭಾವೈಕ್ಯದೊಂದಿಗೆ ಸಂಭ್ರಮದಿಂದ ನೆರವೇರಿತು. ಮಳವಳ್ಳಿ, ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಗಂಧದ ಹಬ್ಬದ ಪ್ರಯುಕ್ತ ಹಿಂದೂಗಳು ಮಸೀದಿಗೆ ಆಗಮಿಸಿ ಕಲ್ಲು ಸಕ್ಕರೆ, ಉರಿಗಡಲೆ ಮತ್ತು ಕಡ್ಲೆ ಪುರಿಯನ್ನು ಅರ್ಪಿಸಿದರು. ಮಸೀದಿ ಗುರುಗಳಾದ ರಫೀಕ್ ಅಹಮದ್, ಹುಲ್ಲಹಳ್ಲಿ ಮಸೀದಿ ಸಮಿತಿ ಅಧ್ಯಕ್ಷ ಅಲಿಜಾನ್, ಕಾರ್ಯದರ್ಶಿ ಇನಾಯತ್ ಪಾಷಾ, ಖಜಾಂಚಿ ಅಬ್ದುಲ್ ಅಜೀದ್, ಸಫೀ ಅಹಮದ್, ಅಮೀರ್, ಚಾಂದ್ ಪಾಷಾ, ಸೋಹೇಲ್, ಸದ್ರುಲ್ಲಾ, ಕಮಲ್ ನಾಸೀರ್ ಷರೀಫ್, ಮುನಾವರ್ ಪಾಷಾ ಉಪಸ್ಥಿತರಿದ್ದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruReligionFestivalHalaguruHuchchegaudanadoddi


