BLR Today
ಮಂಗಳವಾರ, ಅಕ್ಟೋಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಹೆಬ್ಬಾಳದಲ್ಲಿ ಭಾಷೆ ಸುಧಾರಣೆಗಾಗಿ ಉಚಿತ ಶಿಬಿರ ಆಯೋಜನೆ

ಹೆಬ್ಬಾಳದಲ್ಲಿ ಭಾಷೆ ಸುಧಾರಣೆಗಾಗಿ ಉಚಿತ ಶಿಬಿರ ಆಯೋಜನೆ
ಚಿತ್ರ: Prajavani

ತೊದಲುವಿಕೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಮತ್ತು ವಯಸ್ಕರಿಗಾಗಿ ಹೆಬ್ಬಾಳದಲ್ಲಿ ಸಂವಾದ್‌ ಇನ್‌ಸ್ಟಿಟ್ಯೂಟ್‌ ಆಫ್ ಸ್ಪೀಚ್ ಆ್ಯಂಡ್‌ ಹಿಯರಿಂಗ್ ವತಿಯಿಂದ ಇದೇ 31 ಮತ್ತು ನವೆಂಬರ್ 1ರಂದು ಶಿಬಿರ ಆಯೋಜಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಡೆಯುವ ಶಿಬಿರದಲ್ಲಿ ತರಬೇತಿ ಮತ್ತು ನಿರಂತರ ಅಭ್ಯಾಸದ ಮೂಲಕ ಮಾತು ಸರಾಗಗೊಳಿಸಲು ಹಾಗೂ ಮಾತಿನ ಮೇಲೆ ಉತ್ತಮ ನಿಯಂತ್ರಣ ಸಾಧಿಸಲು ನೆರವಾಗಲಿದೆ. ನೋಂದಣಿ ಉಚಿತವಾಗಿದ್ದು, ಮೊ.ಸಂ. 9663388623 ಅಥವಾ 9845589061 ಸಂಪರ್ಕಿಸಬಹುದು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHealthEducation