ಬೆಂಗಳೂರಿನಲ್ಲಿ ಅಡಮಾನ ನೆಪದಲ್ಲಿ ಅಕ್ರಮವಾಗಿ ಅಧಿಕ ಬೆಲೆಗೆ ವಾಹನ ಮಾರುತ್ತಿದ್ದ ವಂಚಕರ ಜಾಲ ಪತ್ತೆ: ಕಾರು ಡೀಲರ್ ಬಂಧನ, 14 ಕಾರು ಜಪ್ತಿ
ಸಾಲದ ಕಂತು ಬಾಕಿ ಇದ್ದ ವಾಹನಗಳನ್ನು ಕಡಿಮೆ ಬೆಲೆಗೆ ಅಡಮಾನ ಇಟ್ಟುಕೊಂಡು, ಸಾಲ ತೀರಿಸದೇ ಇತರರಿಗೆ ಹೆಚ್ಚಿನ ಬೆಲೆಗೆ ಮಾರಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ವಂಚಕರ ಜಾಲವನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಕಾರು ಡೀಲರ್‌ನನ್ನು ಬಂಧಿಸಿದ್ದು, 1.51 ಕೋಟಿ ರೂ. ಮೌಲ್ಯದ 14 ಕಾರು, 2 ಆಟೋ, 6 ಬೈಕ್ ಹಾಗೂ 1 ಗೂಡ್ಸ್ ವಾಹನ ಜಪ್ತಿ ಮಾಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಉಳಿದ 6 ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೂಲ ವರದಿ: Vijaya Karnataka
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeFraud


