ಬೆಂಗಳೂರು ಮತ್ತು ಬೀದರ್ ನಡುವೆ 4 ವಿಶೇಷ ರೈಲುಗಳು; ಯಾವೆಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ
ಪ್ರಯಾಣಿಕರ ಬೇಡಿಕೆ ಮತ್ತು ಹೆಚ್ಚುವರಿ ದಟ್ಟಣೆ ನಿಭಾಯಿಸಲು ರೈಲ್ವೆ ಸೋಲಾಪುರ ವಿಭಾಗದ ನಿಲ್ದಾಣಗಳ ಮೂಲಕ ಬೆಂಗಳೂರು ಕಾಂಟ್ ಮತ್ತು ಬೀದರ್ ನಡುವೆ 4 ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಸೆಂಟ್ರಲ್ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಸಂಖ್ಯೆ 06589 ಬೆಂಗಳೂರು ಕಾಂಟ್ ನಿಂದ ಅ.16ರಂದು ರಾತ್ರಿ 11ಕ್ಕೆ ಹೊರಟು, ಮರುದಿನ ಮಧ್ಯಾಹ್ನ 02:15ಕ್ಕೆ ಬೀದರ್ ತಲುಪಲಿದೆ. ರೈಲು ಸಂಖ್ಯೆ 06590 ಬೀದರ್ ನಿಂದ ಅ.10ರಂದು ಹಾಗೂ ಅ.17ರಂದು ಸಂಜೆ 04ಕ್ಕೆ ಹೊರಟು, ಮರುದಿನ ಬೆಳಗ್ಗೆ 09:45ಕ್ಕೆ ಬೆಂಗಳೂರು ಕಾಂಟ್ ತಲುಪಲಿದೆ. ಹುಮ್ನಾಬಾದ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕಗಳಲ್ಲಿ ರೈಲು ನಿಲುಗಡೆಯಾಗಲಿವೆ.
ಮೂಲ ವರದಿ: Asianet Suvarna News
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruTrainsInfrastructure


