ದಸರಾ ಹಬ್ಬದ ಸಂದರ್ಭದಲ್ಲಿ ಬೆಂಗಳೂರು ಮತ್ತು ಬೀದರ್ ನಡುವೆ ನಾಲ್ಕು ವಿಶೇಷ ರೈಲು
ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ಸೋಲಾಪುರ ರೈಲ್ವೆ ವಿಭಾಗವು ಬೆಂಗಳೂರು ಕಂಟೋನ್ಮೆಂಟ್ ಹಾಗೂ ಬೀದರ್ ನಡುವೆ ನಾಲ್ಕು ವಿಶೇಷ ರೈಲುಗಳಿಗೆ ವ್ಯವಸ್ಥೆ ಮಾಡಿದೆ. ರೈಲು ಗಾಡಿ ಸಂಖ್ಯೆ 06589 ಬೆಂಗಳೂರು ಕಂಟೋನ್ಮೆಂಟ್-ಬೀದರ್ ವಿಶೇಷ ರೈಲು ಅ. 9 ಮತ್ತು 16ರಂದು ರಾತ್ರಿ 11ಗಂಟೆಗೆ ಬೆಂಗಳೂರಿನ ಕಂಟೋನ್ಮೆಂಟ್‌ನಿಂದ ಹೊರಟು ಮರುದಿನ ಮಧ್ಯಾಹ್ನ 2.15ಕ್ಕೆ ಬೀದರ್ ತಲುಪಲಿದೆ. ರೈಲು ಗಾಡಿ ಸಂಖ್ಯೆ 06590 ಬೀದರ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು ಅ. 10 ಹಾಗೂ 17ರಂದು ಸಂಜೆ 4 ಗಂಟೆಗೆ ಬೀದರ್‌ನಿಂದ ಹೊರಟು, ಮರುದಿನ ಬೆಳಿಗ್ಗೆ 9.45 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruRailwayDasara


